
ಈ ಚಿತ್ರದಲ್ಲಿ ಸಮರ್ಜಿತ್ ಲಂಕೇಶ್ ಅವರಿಗೆ ಜೋಡಿಯಾಗಿ ಸಾನ್ಯಾ ಅಯ್ಯರ್ ಅಭಿನಯಿಸಿದ್ದು, ಸಂಪತ್ ಮೈತ್ರೇಯ, ಎಸ್ತರ್ ನರೋನ, ಮುಖ್ಯಮಂತ್ರಿ ಚಂದ್ರು, ಮಾನಸಿ ಸುಧೀರ್, ಸಿಹಿ ಕಹಿ ಚಂದ್ರು, ಲೂಸ್ ಮಾದ ಯೋಗಿ, ರಾಜೀವ್ ಪಿಳ್ಳೈ, ತೆರೆ ಹಂಚಿಕೊಂಡಿದ್ದಾರೆ. ಲಾಫಿಂಗ್ ಬುದ್ಧ ಫಿಲಂಸ್ ಬ್ಯಾನರ್ ನಲ್ಲಿ ಇಂದ್ರಜಿತ್ ಲಂಕೇಶ್ ನಿರ್ಮಿಸಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ, ಎ.ವಿ.ಕೃಷ್ಣ ಕುಮಾರ್ ಛಾಯಾಗ್ರಹಣ, ಮೋಹನ್ ಭಜರಂಗಿ ನೃತ್ಯ ನಿರ್ದೇಶನ, ಡಾಕ್ಟರ್ ರವಿವರ್ಮ ಹಾಗೂ ಡಿಫ್ರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿದೆ. ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಬರ್ಗಿ, ಅನಿರುದ್ಧ ಶಾಸ್ತ್ರಿ ಸಂಗೀತ ಸಂಯೋಜನೆ ನೀಡಿದ್ದಾರೆ.