ಚಿರತೆ ಗಣತಿ ಕೈಗೊಳ್ಳಲು ಅರಣ್ಯ ಇಲಾಖೆ ಸಜ್ಜಾಗಿದೆ. ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಬಳ್ಳಾರಿ – ವಿಜಯನಗರ ಉಭಯ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಈ ಗಣತಿ ನಡೆಯಲಿದೆ.
ಪ್ರತಿಯೊಂದು ಚಿರತೆಯ ಚರ್ಮದ ಚುಕ್ಕೆಯ ಆಕಾರ ಭಿನ್ನ ಭಿನ್ನವಾಗಿರುತ್ತದೆ ಎಂದು ಹೇಳಲಾಗಿದ್ದು, ಹೀಗಾಗಿ ಕ್ಯಾಮರಾದಲ್ಲಿ ಸೆರೆಯಾದ ಚಿರತೆಗಳ ಮಾಹಿತಿಯನ್ನು ಆಧರಿಸಿ ಈ ಗಣತಿ ನಡೆಸಲಾಗುತ್ತದೆ.
ತಲೆ ಕೂದಲು ಬೆಳ್ಳಗಾದವರಿಗೆ ಇಲ್ಲಿದೆ ಸುಲಭ ‘ಪರಿಹಾರ’
ಒಟ್ಟು ಎರಡು ಹಂತದಲ್ಲಿ ಸಮೀಕ್ಷೆ ನಡೆಯಲಿದ್ದು, ಫೆಬ್ರವರಿ 2ನೇ ವಾರದಲ್ಲಿ ಚಿರತೆಗಳ ಗಣತಿ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಈವರೆಗೆ ಹುಲಿಗಣತಿ ನಡೆಯುತ್ತಿದ್ದು, ಈಗ ಚಿರತೆ ಗಣತಿ ನಡೆಯುತ್ತಿದೆ.