alex Certify ‘ಜೈ ಹಿಂದ್’: ಅದ್ಭುತವಾಗಿದೆ ಯೋಧನ ಸಾಹಸ, ವಿದ್ಯುತ್ ಜಮ್ವಾಲ್ ಶೇರ್ ಮಾಡಿದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜೈ ಹಿಂದ್’: ಅದ್ಭುತವಾಗಿದೆ ಯೋಧನ ಸಾಹಸ, ವಿದ್ಯುತ್ ಜಮ್ವಾಲ್ ಶೇರ್ ಮಾಡಿದ ವಿಡಿಯೋ ವೈರಲ್

ಅದ್ಭುತ ಸಾಹಸ ಪ್ರದರ್ಶನಕ್ಕೆ ಹೆಸರಾದ ನಟ ವಿದ್ಯುತ್ ಜಮ್ವಾಲ್ ಅವರು ದೇಶ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಪ್ರಪಂಚದಾದ್ಯಂತದ ಅಗ್ರ ಆರು ಮಾರ್ಷಲ್ ಆರ್ಟ್ಸ್ ಕಲಾವಿದರ ಪಟ್ಟಿಯಲ್ಲಿ ವಿದ್ಯುತ್ ಜಮ್ವಾಲ್ ಅವರೂ ಇದ್ದಾರೆ.

ಇದು ಮಾತ್ರವಲ್ಲ, ಲೂಪರ್‌ನ ಕ್ಯುರೇಟೆಡ್ ಪ್ರತಿಷ್ಠಿತ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಅವರಾಗಿದ್ದಾರೆ. ವಿದ್ಯುತ್ ಜಮ್ವಾಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅದ್ಭುತ ಸಾಹಸಗಳ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ವೈರಲ್ ಆಗುತ್ತಿದೆ. ಇದನ್ನು ನೋಡಿದವರು ಆಶ್ಚರ್ಯಚಕಿತರಾಗಿದ್ದಾರೆ.

ವಿಡಿಯೋದಲ್ಲಿ ಯೋಧರೊಬ್ಬರು ಸೇನಾ ಸಮವಸ್ತ್ರವನ್ನು ಧರಿಸಿರುವುದು ಕಂಡುಬಂದಿದೆ. ಆ ಯುವಕನ ಸ್ಟಂಟ್ ನೋಡಿ ಯಾರೇ ಆಗಲಿ ಅವರ ಅಚ್ಚರಿಪಡುತ್ತಾರೆ.

ಮೊದಲ ಸಾಹಸದಲ್ಲಿ, ಯೋಧ ಬಿದಿರು ಕೋಲನ್ನು ನೆಲದ ಮೇಲೆ ವಕ್ರವಾಗಿ ನಿಲ್ಲುವಂತೆ ಮಾಡುತ್ತಾನೆ. ನಂತರ ಅದರ ಮೇಲೆ ಏರುವ ಮೂಲಕ ಪ್ರಚಂಡ ಸಮತೋಲನವನ್ನು ಮಾಡುತ್ತಾನೆ.

ಎರಡನೆ ಸ್ಟಂಟ್ ಪ್ರಚಂಡವಾಗಿದೆ. ಗಾಳಿಯಲ್ಲಿ ಹಾರಾಡುತ್ತಾ ಬಹಳ ಸುಲಭವಾಗಿ ಸ್ಟಂಟ್ ಮಾಡುವುದನ್ನು ಕಾಣಬಹುದು.

ಮುಂದಿನ ಸ್ಟಂಟ್‌ನಲ್ಲಿ ಅವರು 3 ಗಾಜಿನ ಬಾಟಲಿಗಳ ಮೇಲೆ ತನ್ನ ಎರಡೂ ಕಾಲುಗಳು ಮತ್ತು ಒಂದು ಕೈಯಿಂದ ಪುಷ್ ಅಪ್ ಮಾಡುವುದನ್ನು ಕಾಣಬಹುದು.

ಈ ವೀಡಿಯೋ ನೋಡಿದ ಜನರು ಈ ಸಹೋದರ ಯಾರು ಎಂದು ಕೇಳಿದ್ದಾರೆ. ವಿದ್ಯುತ್ ಜಮ್ವಾಲ್ ಅವರು ವಿಡಿಯೋ ಹಂಚಿಕೊಂಡಿರುವ ಜವಾನನ ಹೆಸರನ್ನು ಅನ್ಮೋಲ್ ಚೌಧರಿ ಎಂದು ಹೇಳಲಾಗುತ್ತಿದೆ. ಅನ್ಮೋಲ್ ತಮ್ಮ ಸ್ಟಂಟ್‌ ಗಳ ಅನೇಕ ವಿಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...