ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿರುವ ತನ್ನಂತೆಯೇ ಆನೆಯೊಂದು ಅನುಕರಣೆ ಮಾಡುತ್ತಿರುವ ವಿಡಿಯೋವೊಂದನ್ನು ಯುವತಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಕಂಟೆಂಟ್ ಸೃಷ್ಟಿಕರ್ತೆ ವೈಷ್ಣವಿ ನಾಯ್ಕ್ ಈ ವಿಡಿಯೋ ಮಾಡಿದ್ದಾರೆ. ವೈಷ್ಣವಿಯ ನೃತ್ಯಕ್ಕೆ ಪ್ರತಿಯಾಗಿ ಆನೆಯೂ ಸಹ ಬೀಟ್‌ಗಳಿಗೆ ತನ್ನ ತಲೆಯಾಡಿಸಿಕೊಂಡು ನಲಿಯುತ್ತಿರುವಂತೆ ವಿಡಿಯೋದಲ್ಲಿ ಕಂಡು ಬಂದಿದೆ.
“ಆನೆಯೇ ಆಗಲೀ, ಕುದುರೆಯೇ ಆಗಲೀ ಪ್ರಾಣಿಗಳಿಗೆ ಯಾವುದೇ ರೀತಿಯಲ್ಲೂ ಹಿಂಸೆ ಕೊಡುವ ಕೆಲಸಗಳಿಗೆ ಉತ್ತೇಜನ ನೀಡಬೇಡಿ. ಆನೆ ಅಥವಾ ಕುದುರೆ ಸವಾರಿಯ ಹಿಂದೆ ಆ ಪ್ರಾಣಿಗಳು ಏನೆಲ್ಲಾ ವೇದನೆ ಅನುಭವಿಸಿರುತ್ತವೆ ಎಂದು ನಮಗೆ ಗೊತ್ತಿರುವುದಿಲ್ಲ,” ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ.
“ಆನೆ ಇಲ್ಲಿ ನೃತ್ಯ ಮಾಡುತ್ತಿಲ್ಲ!! ಸುದೀರ್ಘಾವಧಿಗೆ ಸರಪಳಿ ಹಾಕಿ ಕಟ್ಟಿಹಾಕಿದ ವೇಳೆ ಆನೆಗಳು ಹಾಗೆ ಮಾಡುತ್ತವೆ. ಅವುಗಳ ಭಾವನೆಗಳೊಂದಿಗೆ ಆಟವಾಡಬೇಡಿ,” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
“ಆನೆಗಳಿಗೆ ಮಾನಸಿಕ ಒತ್ತಡ ಆದಾಗ ಹೀಗೆ ಮಾಡುತ್ತವೆ,” ಎಂದು ಇನ್ನೊಬ್ಬರು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
https://youtu.be/xP_kAq3MOQ8