alex Certify ಪೊಲೀಸರಿಗೆ ಬುದ್ಧಿ ಕಲಿಸಲು ಠಾಣೆಯ ಕುರ್ಚಿಯನ್ನೇ ಕದ್ದೊಯ್ದ ಜಪಾನ್ ಪ್ರಜೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರಿಗೆ ಬುದ್ಧಿ ಕಲಿಸಲು ಠಾಣೆಯ ಕುರ್ಚಿಯನ್ನೇ ಕದ್ದೊಯ್ದ ಜಪಾನ್ ಪ್ರಜೆ…..!

ಜಪಾನ್ ಪ್ರಜೆಗೆ 75,000 ರೂಪಾಯಿಯ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಕರ್ನಾಟಕ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ.

2019 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಚ ನೀಡುವಂತೆ ಪೊಲೀಸರು ಒತ್ತಾಯಿಸಿದ್ದರಿಂದ ಅವರಿಗೆ ಪಾಠ ಕಲಿಸಲೆಂದು 31 ವರ್ಷ ಪ್ರಾಯದ ಜಪಾನ್ ಪ್ರಜೆ ಹಿರೋತೊಷಿ ಟನಕಾ ಬೆಂಗಳೂರಿನ ಜೆಸಿ ನಗರದಲ್ಲಿರುವ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಕುರ್ಚಿಯನ್ನು ಕದ್ದಿದ್ದ. ಅಂದಹಾಗೆ, ಈ ವ್ಯಕ್ತಿ ಇಂಗ್ಲೀಷ್ ಕಲಿಯಲೆಂದು 2019 ರಲ್ಲಿ ಬೆಂಗಳೂರಿಗೆ ಬಂದಿದ್ದ.

ಬಟ್ಟೆ ಹಾಕಲು ಸೋಮಾರಿತನ, ಮೈತುಂಬಾ ಹಚ್ಚೆ ಹಾಕಿಸಿಕೊಂಡುಬಿಟ್ಲು ಮಹಿಳೆ….!

ಈ ಬಗ್ಗೆ ಆಂಗ್ಲ ವೆಬ್ ಸೈಟ್ ಇಂಡಿಯನ್ ಎಕ್ಸ್ ಪ್ರೆಸ್.ಕಾಂ ಜೊತೆ ಪ್ರಕರಣದ ಬಗ್ಗೆ ಹೇಳಿಕೊಂಡಿರುವ ಟನಕಾ, ಆರ್ ಟಿ ನಗರದ ಇಂಗ್ಲೀಷ್ ಕಲಿಕಾ ಕೇಂದ್ರದಲ್ಲಿ ಪ್ರವೇಶ ಪಡೆದಿದ್ದೆ. ಆದರೆ, ಅಲ್ಲಿನ ಪ್ರಾಂಶುಪಾಲರು ತಮ್ಮ ಸಂಸ್ಥೆಯ ಪ್ರಮೋಷನ್ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಸೂಚನೆ ನೀಡಿದ್ದರು. ಆದರೆ, ಇದಕ್ಕಾಗಿ ಸಂಬಳ ನೀಡುವಂತೆ ಆತ ಪ್ರಾಂಶುಪಾಲರಲ್ಲಿ ಮನವಿ ಮಾಡಿದ್ದ.

ಈ ವಿಚಾರವಾಗಿ ಪ್ರಾಂಶುಪಾಲರು ಮತ್ತು ಟನಕಾ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ನೀನು ನನ್ನ ಮೈ ಮುಟ್ಟಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ನೀನು ಬೆಂಗಳೂರಿನಲ್ಲಿ ಇರದಂತೆ ಮಾಡುತ್ತೇನೆ ಎಂದು ಪ್ರಾಂಶುಪಾಲರು ಧಮ್ಕಿ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಟನಕಾ ಪ್ರಾಂಶುಪಾಲರ ಮೇಲೆ ಹಲ್ಲೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಕಲಿಕಾ ಕೇಂದ್ರದ ಮಾಲೀಕ ಟನಕಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ಆದರೆ, ಟನಕಾ ಮತ್ತು ಪ್ರಾಂಶುಪಾಲರಿಬ್ಬರೂ ಸಂಧಾನ ಮಾಡಿಕೊಂಡರು. ಈ ಬಗ್ಗೆ ಟನಕಾ ತಪ್ಪೊಪ್ಪಿಗೆ ನೀಡಲು ಬಂದ ಸಂದರ್ಭದಲ್ಲಿ ಈಗಾಗಲೇ ನಿಮ್ಮ ಎಫ್ಐಆರ್ ದಾಖಲಾಗಿರುವುದರಿಂದ ದೂರನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇಡೀ ಒಂದು ರಾತ್ರಿ ನನ್ನನ್ನು ಪೊಲೀಸ್ ಠಾಣೆಯಲ್ಲೇ ಇರಿಸಲಾಗಿತ್ತು ಮತ್ತು ನಂತರ 19 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು ಎಂದು ಟನಕಾ ಆರೋಪಿಸಿದ್ದಾನೆ.

ಈ ಬಗ್ಗೆ ವಿಚಾರಣೆ ನಡೆಸಿದ ರಾಜ್ಯ ಮಾನವ ಹಕ್ಕುಗಳ ಆಯೋಗ ಟನಕಾ ಗೆ 75 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ. ಕಡೆಗೆ ಕಳೆದ ಶನಿವಾರ ಟನಕಾ ಲಂಚ ಕೇಳಿದ ಪೊಲೀಸರಿಗೆ ಬುದ್ಧಿ ಕಲಿಸಲೆಂದು ಎಸಿಪಿ ಕಚೇರಿಯಲ್ಲಿದ್ದ ಕುರ್ಚಿಯನ್ನು ಎತ್ತಾಕಿಕೊಂಡು ಹೋಗಿದ್ದಾನೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...