ಒಂದು ಕಾಲದಲ್ಲಿ ದೇಶದಲ್ಲಿ ಜನಪ್ರಿಯತೆ ಗಳಿಸಿದ್ದ ಅಂಬಾಸಿಡರ್ ಕಾರು ಇನ್ನೆರಡು ವರ್ಷಗಳಲ್ಲಿ ಹೊಸ ಅವತಾರದಲ್ಲಿ ಭಾರತದ ರಸ್ತೆಗಿಳಿಯಲಿದೆ. ಹಿಂದ್ ಮೋಟರ್ ಫೈನಾನ್ಷಿಯಲ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಚ್ಎಂಎಫ್ ಸಿ) ಮತ್ತು ಪೀಗೋಟ್ ಸಹಭಾಗಿತ್ವದಲ್ಲಿ ಕಾರು ಮತ್ತು ಎಂಜಿನ್ ವಿನ್ಯಾಸಗೊಳ್ಳುತ್ತಿದ್ದು, ಹೊಸ ಲಾಂಛನವನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಈ ಹೊಸ ಕ್ಲಾಸಿಕ್ ಕಾರನ್ನು ಚೆನ್ನೈನಲ್ಲಿರುವ ಸಿಕೆ ಬಿರ್ಲಾ ಗ್ರೂಪ್ ನ ಸಹಸಂಸ್ಥೆಯಾಗಿರುವ ಎಚ್ಎಂಎಫ್ ಸಿಐ ನಡೆಸುತ್ತಿರುವ ಹಿಂದೂಸ್ತಾನ್ ಮೋಟರ್ಸ್ ಘಟಕದಲ್ಲಿ ಉತ್ಪಾದನೆ ಮಾಡಲಾಗುತ್ತದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಎಚ್ಎಂ ನಿರ್ದೇಶಕ ಉತ್ತಮ್ ಬೋಸ್, ಆಂಬಿಗೆ ಹೊಸ ಲುಕ್ ನೀಡುವ ಮೆಕ್ಯಾನಿಕಲ್ ಮತ್ತು ಡಿಸೈನ್ ಕಾರ್ಯಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ ಎಂದು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಭೇಟಿ ಬಳಿಕ ತೆಲಂಗಾಣ ಸಿಎಂ ಕೆಸಿಆರ್ ಕುತೂಹಲದ ಹೇಳಿಕೆ: ತೃತೀಯ ರಂಗ ರಚನೆ ಬಗ್ಗೆ ಚರ್ಚೆ
ಚೆನ್ನೈನ ಎಚ್ಎಂ ಘಟಕದಲ್ಲಿ ಮಿತ್ಸುಬಿಶಿ ಕಾರುಗಳನ್ನು ತಯಾರಿಸಲಾಗುತ್ತಿತ್ತು. 2014 ರವರೆಗೆ ಎಚ್ಎಂನ ಉತ್ತರ್ಪಾರದಲ್ಲಿ ಕೊನೆಯ ಅಂಬಾಸಿಡರ್ ಕಾರನ್ನು ಉತ್ಪಾದನೆ ಮಾಡಲಾಗಿತ್ತು. ನಂತರ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. 2017 ರಲ್ಲಿ ಎಚ್ಎಂ ಮಾಲೀಕ ಸಂಸ್ಥೆಯಾದ ಸಿಕೆ ಬಿರ್ಲಾ ಗ್ರೂಪ್ ಕಾರ್ ಬ್ರ್ಯಾಂಡ್ ಅನ್ನು ಫ್ರೆಂಚ್ ಆಟೋಮೇಕರ್ ವೊಂದಕ್ಕೆ 80 ಕೋಟಿ ರೂಪಾಯಿಗೆ ಮಾರಾಟ ಮಾಡಿತ್ತು.