ಪತ್ನಿಯ ದೇಹವನ್ನು 200 ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ನದಿಗೆ ಎಸೆದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.
ನಿಕೋಲಸ್ ಮೆಟ್ಸನ್ ಎಂಬಾತ ತನ್ನ 26 ವರ್ಷದ ತನ್ನ ಪತಿ ಹೋಲಿ ಬ್ರಾಮ್ಲಿಳನ್ನು ಮಾರ್ಚ್ 2023 ರಲ್ಲಿ ಅವಳನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿ ಫ್ಲ್ಯಾಟ್ ನ ಕಿಚನ್ ಲಾರ್ಡರ್ನಲ್ಲಿ ಒಂದು ವಾರದವರೆಗೆ ಸಂಗ್ರಹಿಸಿಟ್ಟಿದ್ದರು.
ಮೃತ ದೇಹವನ್ನು ತೊಡೆದುಹಾಕುವುದು ಹೇಗೆ”, “ನನ್ನ ಹೆಂಡತಿ ಸತ್ತರೆ ನಾನು ಏನು ಪ್ರಯೋಜನಗಳನ್ನು ಪಡೆಯಬಹುದು” ಮತ್ತು “ದೇವರು ಕೊಲೆಯನ್ನು ಕ್ಷಮಿಸುತ್ತಾನೆಯೇ” ಸೇರಿದಂತೆ ಮೆಟ್ಸನ್ ಗೂಗಲ್ ಹುಡುಕಾಟಗಳನ್ನು ಮಾಡಿದ್ದನು ಎಂಬುದು ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿತ್ತು.
ಮೆಟ್ಸನ್ ತನ್ನ ಕೃತ್ಯವನ್ನು ಮರೆಮಾಚಲು ದೊಡ್ಡ ಪ್ರಮಾಣದ ಶುಚಿಗೊಳಿಸುವ ಉತ್ಪನ್ನಗಳನ್ನು ಖರೀದಿಸುವ ಮೂಲಕ ಮತ್ತು ತನ್ನ ಶಾಲಾ ಸ್ನೇಹಿತ ಜೋಶುವಾ ಹ್ಯಾನ್ಕಾಕ್ (28) ಅವರ ಸಹಾಯ ಪಡೆದಿದ್ದನು.