ಹೈದರಾಬಾದ್‌ನ ಹೊರವಲಯದಲ್ಲಿರುವ ಅಬ್ದುಲ್ಲಾಪುರಮೆಟ್‌ನ ಜೆಎನ್‌ಆರ್ ಕಾಲೋನಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬ ಅದೃಷ್ಟವಶಾತ್ ಬಚಾವಾಗಿದ್ದಾನೆ. ಗಾಯಾಳು ವ್ಯಕ್ತಿಯನ್ನ 43 ವರ್ಷದ ನರಸಿಂಹ ಎಂದು ಗುರುತಿಸಲಾಗಿದೆ. ಈ ಘಟನೆ ಮಂಗಳವಾರ ನಡೆದಿದ್ದು ಮಾನಸಿಕ ಅ್ವಸ್ಥನಾಗಿದ್ದ ನರಸಿಂಹ ಜೀವನದಿಂದ ಬೇಸತ್ತು ತಮ್ಮ ಕತ್ತನ್ನ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ವರದಿಯಾಗಿದೆ.
ನೆರೆಹೊರೆಯವರ ಸಮಯಪ್ರಜ್ಞೆಯಿಂದ ನರಸಿಂಹನ ಪ್ರಾಣ ಉಳಿದಿದೆ. ಗಂಟಲು, ಕೈ ಮತ್ತು ಕಾಲುಗಳನ್ನ ಕತ್ತರಿಸಿಕೊಂಡು, ಜೆಎನ್‌ಆರ್ ಕಾಲೋನಿಯ ತನ್ನ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನರಸಿಂಹನನ್ನ ಆತನ ನೆರೆಮನೆಯವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಾನು ಕ್ಷಮೆಯಾಚಿಸಲ್ಲ; ಆಪ್ಘಾನ್ ನಿಂದ ಸೈನ್ಯ ವಾಪಸಾತಿ ಸಮರ್ಥಿಸಿಕೊಂಡ ಅಧ್ಯಕ್ಷ ಜೋ ಬಿಡೆನ್…!
ನರಸಿಂಹ ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದನು. ಆತನ ಪತ್ನಿ ಬೇರೊಬ್ಬನನ್ನು ಮದುವೆಯಾಗಿ ತನ್ನ ಮಕ್ಕಳನ್ನು ಕರೆದುಕೊಂಡು ಹೋಗಿದ್ದಳು. ಇದರಿಂದ ನರಸಿಂಹ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿಗೆ ಒಳಗಾಗಿದ್ದರು. ಆತ ಮದ್ಯದ ಅಮಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನರಸಿಂಹ ಆತ್ಮಹತ್ಯೆಗೆ ಯತ್ನಿಸಿರುವುದು ಇದೇ ಮೊದಲಲ್ಲ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.
ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನರಸಿಂಹ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.ಅವನು ಈ ಹಿಂದೆ ಕೊತಪೇಟ್ ನಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ. ಈಗ ಆಸ್ಪತ್ರೆಯಲ್ಲು ಆತ ಶಸ್ತ್ರಚಿಕಿತ್ಸೆಯ ಕತ್ತರಿ ಹಿಡಿದು ತನ್ನ ಕತ್ತು ಸೀಳಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.