ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಜೀರಿಗೆ ಹಾಗೂ ಬೆಲ್ಲ ಇದ್ದೇ ಇರುತ್ತೆ. ಜೀರಿಗೆ ಹಾಗೂ ಬೆಲ್ಲ ಎರಡೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಜೀರಿಗೆ ಬೆಲ್ಲದ ನೀರು ಅನೇಕ ರೋಗಗಳನ್ನು ನಿವಾರಿಸುವ ಶಕ್ತಿ ಹೊಂದಿದೆ.
ರಕ್ತಹೀನತೆಗೆ ಮದ್ದು : ಜೀರಿಗೆ ಬೆಲ್ಲದ ನೀರನ್ನು ಪ್ರತಿದಿನ ಸೇವಿಸುತ್ತ ಬಂದರೆ ರಕ್ತಹೀನತೆ ಸಮಸ್ಯೆ ಕಡಿಮೆಯಾಗುತ್ತದೆ. ರಕ್ತದಲ್ಲಿರುವ ಕಲ್ಮಶವನ್ನು ಇದು ಹೊರ ಹಾಕುತ್ತದೆ.
ತಲೆ ನೋವಿಗೆ ರಾಮಬಾಣ : ತಲೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಜೀರಿಗೆ ನೀರಿಗೆ ಬೆಲ್ಲ ಬೆರೆಸಿ ಕುಡಿಯಿರಿ. ಇದು ಜ್ವರವನ್ನೂ ಕಡಿಮೆ ಮಾಡುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆಗೆ ಬಲ : ಜೀರಿಗೆ ಹಾಗೂ ಬೆಲ್ಲ ಪ್ರಾಕೃತಿಕ ಗುಣಗಳನ್ನು ಹೊಂದಿದೆ. ದೇಹದಲ್ಲಿರುವ ಕಲ್ಮಶವನ್ನು ಹೊರಗೆ ಹಾಕಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಹೊಟ್ಟೆ ರೋಗಕ್ಕೆ ಗುಡ್ ಬೈ : ಮಲಬದ್ಧತೆ, ಗ್ಯಾಸ್, ಹೊಟ್ಟೆ ನೋವು ಸೇರಿದಂತೆ ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಅನೇಕ ಸಮಸ್ಯೆಗೆ ಜೀರಿಗೆ ಬೆಲ್ಲದ ನೀರು ಮದ್ದು. ನಿಯಮಿತವಾಗಿ ಈ ನೀರನ್ನು ಕುಡಿಯುತ್ತ ಬಂದರೆ ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ದೂರವಾಗುತ್ತವೆ.
ಮುಟ್ಟಿನ ನೋವಿಗೆ ಪರಿಹಾರ : ಅನಿಯಮಿತ ಮುಟ್ಟು ಅಥವಾ ಮುಟ್ಟಿನ ನೋವಿಗೆ ಜೀರಿಗೆ ಬೆಲ್ಲದ ನೀರು ಪರಿಣಾಮಕಾರಿ.
ಬೆನ್ನು ನೋವಿಗೆ ಔಷಧಿ : ಬೆನ್ನು ನೋವಿರಲಿ, ಕಾಲು ನೋವಿರಲಿ ಜೀರಿಗೆ ಬೆಲ್ಲದ ನೀರು ಮಾತ್ರೆಯಂತೆ ಕೆಲಸ ಮಾಡುತ್ತದೆ. ಜೀರಿಗೆ ಬೆಲ್ಲದ ನೀರು ಸೇವಿಸುತ್ತ ಬಂದಲ್ಲಿ ಎಲ್ಲ ನೋವು ಶಮನವಾಗುತ್ತದೆ.
ಒಂದು ಪಾತ್ರೆಗೆ ಎರಡು ಲೋಟ ನೀರನ್ನು ಹಾಕಿ. ಅದಕ್ಕೆ ಒಂದು ಚಮಚ ಬೆಲ್ಲ ಹಾಗೂ ಒಂದು ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತ್ರ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.