alex Certify ಭಕ್ತರನ್ನು ದಂಗಾಗಿಸುವಂತಿದೆ 800 ವರ್ಷಗಳಷ್ಟು ಹಳೆಯ ದಂತೇಶ್ವರಿ ದೇವಾಲಯದ ಇತಿಹಾಸ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಕ್ತರನ್ನು ದಂಗಾಗಿಸುವಂತಿದೆ 800 ವರ್ಷಗಳಷ್ಟು ಹಳೆಯ ದಂತೇಶ್ವರಿ ದೇವಾಲಯದ ಇತಿಹಾಸ !

ಛತ್ತೀಸ್‌ಗಢದ ದಂತೇವಾಡ ಜಿಲ್ಲೆ ಬಹಳ ಪ್ರಸಿದ್ಧಿ ಪಡೆದಿದೆ. ಇದರ ಹಿಂದೆ ಸಕಾರಾತ್ಮಕ ಮತ್ತು ನಕಾರಾತ್ಮಕ ಕಾರಣಗಳಿವೆ. ಈ ಪ್ರದೇಶ ಭಾರತದ ಅತ್ಯಂತ ಹಳೆಯ ವಸಾಹತುಗಳಲ್ಲಿ ಒಂದಾಗಿದೆ. ಇಲ್ಲಿನ ಜಾನಪದ ಸಂಪ್ರದಾಯಗಳು, ನೃತ್ಯ ಮತ್ತು ಸಂಗೀತ ಅತ್ಯಂತ ಆಕರ್ಷಕವಾಗಿವೆ. ಹಿಂದೂ ಧರ್ಮದ ದೃಷ್ಟಿಯಿಂದ ಈ ಸ್ಥಳವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಇಲ್ಲಿ 52ನೇ ಶಕ್ತಿಪೀಠದ ದಂತೇಶ್ವರಿ ದೇವಾಲಯವಿದೆ.

ದಂತೇಶ್ವರಿ ದೇವಸ್ಥಾನದಿಂದಲೇ ಈ ಸ್ಥಳಕ್ಕೆ ದಂತೇವಾಡ ಎಂದು ಹೆಸರಿಸಲಾಯಿತಂತೆ. ಇದಲ್ಲದೇ ದಂತೇವಾಡ ನಕ್ಸಲೀಯರ ಅಟ್ಟಹಾಸಗಳಿಂದಲೂ ಆಗಾಗ ಸುದ್ದಿಮಾಡುತ್ತಲೇ ಇರುತ್ತದೆ. ಸದ್ಯ 800 ವರ್ಷಗಳಷ್ಟು ಹಳೆಯದಾದ ದಂತೇಶ್ವರ ಮಾತಾ ದೇವಾಲಯದ ಸಂರಕ್ಷಣೆಗೆ ಸಂಬಂಧಿಸಿದಂತೆ ASI ಮತ್ತು ದೇವಾಲಯದ ಟ್ರಸ್ಟ್ ಮಧ್ಯೆ ಜಟಾಪಟಿ ಶುರುವಾಗಿದೆ.

ದಂತೇಶ್ವರಿ ಕಾರಿಡಾರ್ ನಿರ್ಮಾಣದಲ್ಲಿ ಡಿಎಂಎಫ್ ಹಗರಣದ ನಂತರ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸುಮಾರು 800 ವರ್ಷಗಳಷ್ಟು ಹಳೆಯದಾದ ಈ ದೇವಾಲಯದ ಆವರಣದಲ್ಲಿ ಫೆಬ್ರವರಿ 2023 ರಿಂದ ದೇವಾಲಯದ ಟ್ರಸ್ಟ್ ನೆಲಸಮ ಕಾರ್ಯ ನಡೆಸುತ್ತಿದೆ. ಕೇಂದ್ರ ಪುರಾತತ್ವ ಸಮೀಕ್ಷೆ (ASI) ಕಳೆದ 11 ತಿಂಗಳುಗಳಲ್ಲಿ ಒಂದರ ನಂತರ ಒಂದರಂತೆ 5 ಎಫ್‌ಐಆರ್‌ಗಳನ್ನು ದಾಖಲಿಸಿದೆ. ದೇವಾಲಯದ ಸಂರಕ್ಷಿತ ಪ್ರದೇಶವನ್ನು ಹಾನಿಗೊಳಿಸಿರುವ ಜೊತೆಗೆ ಇತಿಹಾಸವನ್ನು ಅಳಿಸಿದ ಕಾರಣ ಎಎಸ್ಐ, ದಂತೇವಾಡ ಜಿಲ್ಲಾಧಿಕಾರಿಗೆ 6 ಬಾರಿ ಶೋಕಾಸ್ ನೋಟಿಸ್ ನೀಡಿದ್ದಾರೆ. ವಾಸ್ತವವಾಗಿ ದಂತೇವಾಡದ ಕಲೆಕ್ಟರ್ ಅವರೇ ಈ ದೇವಾಲಯದ ಟ್ರಸ್ಟಿ.

ಈ ದೇವಾಲಯದ ಇತಿಹಾಸ ಅತ್ಯಂತ ಕುತೂಹಲಕಾರಿಯಾಗಿದೆ. ಸತ್ಯಯುಗದಲ್ಲಿ ರಾಜ ದಕ್ಷ ನಡೆಸಿದ ಯಾಗಕ್ಕೆ ತನ್ನ ಪತಿ ಶಿವನನ್ನು ಆಹ್ವಾನಿಸದಿದ್ದಾಗ, ತಾಯಿ ಸತಿ ಯಜ್ಞಕುಂಡಕ್ಕೆ ಆಹುತಿಯಾಗುತ್ತಾಳೆ. ಈ ಘಟನೆಯಿಂದ ವಿಚಲಿತನಾದ ಭಗವಾನ್ ಶಿವನು ಸತಿಯ ಮೃತದೇಹವನ್ನು ಹೊತ್ತುಕೊಂಡು ಇಡೀ ವಿಶ್ವವನ್ನು ಸುತ್ತುತ್ತಾನೆ. ಶಿವನ ಕೋಪದಿಂದ ಉಂಟಾದ ವಿನಾಶವನ್ನು ತಡೆಯಲು, ಭಗವಾನ್ ವಿಷ್ಣುವು ತಾಯಿ ಸತಿಯ ಮೃತ ದೇಹವನ್ನು ತನ್ನ ಚಕ್ರದಿಂದ ವಿಘಟಿಸಿ ಅವಳ ಅವಶೇಷಗಳು ಬಿದ್ದಲ್ಲೆಲ್ಲಾ ಶಕ್ತಿಪೀಠಗಳನ್ನು ಸ್ಥಾಪಿಸಿದ್ದನೆಂಬ ಪುರಾಣವಿದೆ.

ಧಾರ್ಮಿಕ ಗ್ರಂಥಗಳ ಪ್ರಕಾರ ದಂತೇಶ್ವರ ದೇವಾಲಯವನ್ನು ನಿರ್ಮಿಸಿದ ಸ್ಥಳದಲ್ಲಿ ಸತಿ ದೇವಿಯ ಹಲ್ಲು ಬಿದ್ದಿದೆಯಂತೆ. ಆದ್ದರಿಂದಲೇ ಇದನ್ನು ದಂತೇಶ್ವರ ಮಾತಾ ದೇವಾಲಯ ಎಂದು ಕರೆಯಲಾಯಿತು. ದಂತೇಶ್ವರಿ ದೇವಾಲಯವನ್ನು 14 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ದೇಶದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದು. ಇದನ್ನು ಸುಮಾರು 800 ವರ್ಷಗಳ ಹಿಂದೆ ಅನ್ನಮದೇವ ನಿರ್ಮಿಸಿದ.

ಈ ದೇವಾಲಯದ ಮೊದಲ ನವೀಕರಣವನ್ನು 700 ವರ್ಷಗಳ ಹಿಂದೆ ಪಾಂಡುಪುತ್ರ ಅರ್ಜುನನ ವಂಶದ ರಾಜರು ಮಾಡಿದರು. ನಂತರ 1932-33 ರಲ್ಲಿ ಬಸ್ತಾರ್ ರಾಣಿ ಪ್ರಫುಲ್ಲ ಕುಮಾರಿ ದೇವಿ ಇದನ್ನು ನವೀಕರಿಸಿದರು. ಅಷ್ಟೇ ಅಲ್ಲ, ಈ ದೇವಾಲಯವು ತಾಂತ್ರಿಕರ ಧ್ಯಾನಸ್ಥಳವೂ ಆಗಿದೆ. ಇಂದಿಗೂ ಪರ್ವತಗಳು ಮತ್ತು ಗುಹೆಗಳಲ್ಲಿ ವಾಸಿಸುವ ತಂತ್ರಿಗಳು ಈ ದೇವಾಲಯಕ್ಕೆ ದರ್ಶನಕ್ಕಾಗಿ ರಹಸ್ಯವಾಗಿ ಬರುತ್ತಾರೆ ಎಂದು ಹೇಳಲಾಗುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...