alex Certify ಮೊದಲ ರಾತ್ರಿ ಗಂಡನ ವರ್ತನೆಗೆ ಬೆಚ್ಚಿಬಿದ್ದ ನವವಧು; ಮರುದಿನವೇ ತವರು ಮನೆ ಸೇರಿ ಮಹಿಳಾ ಆಯೋಗಕ್ಕೆ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ರಾತ್ರಿ ಗಂಡನ ವರ್ತನೆಗೆ ಬೆಚ್ಚಿಬಿದ್ದ ನವವಧು; ಮರುದಿನವೇ ತವರು ಮನೆ ಸೇರಿ ಮಹಿಳಾ ಆಯೋಗಕ್ಕೆ ದೂರು

ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಅತ್ಯಂತ ಮಹತ್ತರ ಘಟ್ಟ. ಮದುವೆ ಬಗ್ಗೆ ಅನೇಕರು ಸಾಕಷ್ಟು ಕನಸು ಕಟ್ಟಿಕೊಂಡಿರುತ್ತಾರೆ. ಅದೇ ರೀತಿ ತನ್ನ ಮದುವೆ ಬಗ್ಗೆ ಅನೇಕ ಕನಸು ಕಂಡಿದ್ದ ಉತ್ತರಾಖಂಡದ ಹುಡುಗಿಯೊಬ್ಬಳು ಹರಿಯಾಣದ ಯಮುನಾ ನಗರದ ಯುವಕನನ್ನು ಮದುವೆಯಾಗಿದ್ದಳು. ಆದರೆ ಮೊದಲ ರಾತ್ರಿಯಂದೇ ಆಕೆ ವರನ ನಡೆಗೆ ಬೆಚ್ಚಿಬಿದ್ದು ಮರುದಿನವೇ ತವರು ಮನೆ ಸೇರಿದಳು. ಗಂಡ ಮತ್ತು ಆತನ ಕುಟುಂಬಸ್ಥರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ.

ಮಾಹಿತಿ ಪ್ರಕಾರ ಹರಿದ್ವಾರದ ಹುಡುಗಿಯೊಬ್ಬಳು ಹರಿಯಾಣದ ಯಮುನಾ ನಗರದಲ್ಲಿ ನೆಲೆಸಿರುವ ಯುವಕನನ್ನು ಮದುವೆಯಾಗಿದ್ದಾಳೆ. ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಈ ಸಂಬಂಧ ನಿಗದಿಯಾಗಿದೆ. ವಧು ಮತ್ತು ವರ ಇಬ್ಬರೂ ಪರಸ್ಪರ ಇಷ್ಟಪಟ್ಟ ನಂತರ ಮದುವೆಯೂ ನಡೆಯಿತು. ವಧು ತನ್ನ ಮದುವೆಯ ಬಗ್ಗೆ ತುಂಬಾ ಸಂತೋಷಪಟ್ಟು ಬಹಳ ಭರವಸೆಯೊಂದಿಗೆ ವರನೊಂದಿಗೆ ತನ್ನ ಅತ್ತೆಯ ಮನೆ ತಲುಪಿದಳು. ಎಲ್ಲಾ ಸಂಪ್ರದಾಯಗಳ ನಂತರ ಮೊದಲ ರಾತ್ರಿಯಲ್ಲಿ ತನ್ನ ವರನಿಗಾಗಿ ಕಾಯುತ್ತಿದ್ದಳು. ವರ ಬರದ ಕಾರಣ ಆತನನ್ನು ನೋಡಲು ಬೇರೆ ಕೋಣೆಗೆ ಹೋದಳು. ಅಲ್ಲಿ ವರನು ಕನ್ನಡಿ ಮುಂದೆ ನಿಂತು ಹುಡುಗಿಯಂತೆ ಮೇಕಪ್ ಮಾಡುತ್ತಿದ್ದನ್ನು ನೋಡಿ ತಕ್ಷಣ ಆಕೆ ದಿಗ್ಭ್ರಮೆಗೊಂಡಳು.

ಇದನ್ನು ನೋಡಿದ ವಧು ಕಿರುಚಿದ್ದಾಳೆ. ಆಗ ವರನು ತಾನು ಹುಡುಗಿಯಂತೆ ಬದುಕಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲ, ವರನು ತಾನು ಸಲಿಂಗಕಾಮಿ ಎಂದು ಹೇಳಿದ್ದಾನೆ. ತಾನು ಪುರುಷರಲ್ಲಿ ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದಾನೆ.

ಹಾಗಾದರೆ ನೀವು ನನ್ನನ್ನು ಏಕೆ ಮದುವೆಯಾದಿರಿ ? ಎಂಬ ವಧುವಿನ ಪ್ರಶ್ನೆಗೆ ಉತ್ತರಿಸಿದ ವರ ಜನರು ಸಮಾಜದಲ್ಲಿ ಸಲಿಂಗಕಾಮಿ ಸಂಬಂಧಗಳನ್ನು ಒಪ್ಪಿಕೊಳ್ಳುವುದಿಲ್ಲ. ಹುಡುಗಿಯನ್ನು ಮದುವೆಯಾಗುವ ಕುಟುಂಬದವರ ಮಾತನ್ನು ನಿರಾಕರಿಸುತ್ತಲೇ ಬಂದೆ. ಆದರೆ ಇದನ್ನು ಎಷ್ಟು ದಿನ ಮಾಡಬಹುದು? ಮದುವೆಗೆ ಒತ್ತಡ ಹೇರಿದಾಗ ನಿಮ್ಮೊಂದಿಗೆ ಮದುವೆಗೆ ಒಪ್ಪಿಗೆ ಸೂಚಿಸಿದ್ದಾಗಿ ಹೇಳಿದ್ದಾನೆ.

ವರನ ಮಾತು ಕೇಳಿ ವಧುವಿಗೆ ತನ್ನ ಜೀವನವೇ ನಾಶವಾದಂತಾಯಿತು. ಮರುದಿನವೇ ಅವಳು ತನ್ನ ತಾಯಿಯ ಮನೆಗೆ ಬಂದು ವರನ ಬಗ್ಗೆ ಸತ್ಯವನ್ನು ಮನೆಯವರಿಗೆ ತಿಳಿಸಿದಳು. ಇದನ್ನು ಕೇಳಿ ಅವರಿಗೂ ಗಾಬರಿಯಾಯಿತು. ಆಗ ವಧು ಈ ಕುರಿತು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ನಾವು ಮೋಸ ಹೋಗಿದ್ದೇವೆ, ವರನು ಸಲಿಂಗಕಾಮಿ ಎಂದು ನನಗೆ ಮೊದಲೇ ತಿಳಿದಿದ್ದರೆ, ನಾನು ಅವನನ್ನು ಎಂದಿಗೂ ಮದುವೆಯಾಗುತ್ತಿರಲಿಲ್ಲ. ನನ್ನ ಅತ್ತೆ- ಮಾವನೂ ಈ ಬಗ್ಗೆ ನಮಗೆ ಏನೂ ಹೇಳಲಿಲ್ಲ. ಇದರಿಂದ ನನ್ನ ಜೀವನ ಹಾಳಾಗಿದೆ. ಈ ಪ್ರಕರಣದಲ್ಲಿ ನಮಗೆ ನ್ಯಾಯ ಬೇಕೆಂದು ಆಗ್ರಹಿಸಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...