alex Certify ಸೆಂಚುರಿ ಬಾರಿಸಿದ ಗೋಲ್ಡರ್ನ್ ಗರ್ಲ್ಸ್‌ಗೆ ಹರಿದುಬಂತು ಹಾರೈಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಂಚುರಿ ಬಾರಿಸಿದ ಗೋಲ್ಡರ್ನ್ ಗರ್ಲ್ಸ್‌ಗೆ ಹರಿದುಬಂತು ಹಾರೈಕೆ

ತಮ್ಮ 100ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಮಂದಿಯನ್ನು ನೋಡುವುದೇ ಅಪರೂಪ. ಬಹಳ ಕಡಿಮೆ ಮಂದಿಗೆ ಶತಾಯುಷಿಗಳಾಗುವ ಭಾಗ್ಯ ಸಿಗುತ್ತದೆ.

ಅಂಥದ್ದರಲ್ಲಿ, ಕೋವಿಡ್-19 ಲಸಿಕೆ ಪಡೆದ ನ್ಯೂಯಾರ್ಕ್‌ನ ರುತ್‌ ಶ್ವಾರ್ಟ್ಜ್, ಎಡಿತ್‌ ಮಾಸ್ಕೌ ಮತ್ತು ಲೊರೈನ್ ಪಿರೆಲ್ಲೋ ತಮ್ಮ 100ನೇ ಹುಟ್ಟುಹಬ್ಬವನ್ನು ಜೊತೆಯಾಗಿ ಆಚರಿಸಿಕೊಂಡ ವಿಶಿಷ್ಟ ಘಳಿಗೆಯೊಂದು ಕಳೆದ ತಿಂಗಳು ಘಟಿಸಿದೆ.

ನಗರದ ವೃದ್ಧಾಶ್ರಮವೊಂದರಲ್ಲಿ ಈ ಮೂವರೂ ತಮ್ಮ ಶತಮಾನೋತ್ಸವ ಆಚರಿಸಿದ್ದಾರೆ.

ಈ ಮೂವರು ಹಿರಿತಲೆಗಳು ವಾಸಿಸುತ್ತಿರುವ ಆಟ್ರಿಯಾ ಸೀನಿಯರ್‌ ಲಿವಿಂಗ್ ಹೆಸರಿನ ವೃದ್ಧಾಶ್ರಮ ಇವರಿಗೆಂದು ವಿಶೇಷವಾದ ಕಾರ್ಯಕ್ರಮ ಆಯೋಜಿಸಿ, ಕೇಕ್‌ ಕತ್ತರಿಸುತ್ತಿರುವ ’ಗೋಲ್ಡನ್ ಗರ್ಲ್ಸ್’ ಚಿತ್ರವನ್ನು ಶೇರ್‌ ಮಾಡಿಕೊಂಡಿದೆ. ನೆಟ್ಟಿಗರು ಈ ಶತಾಯುಷಿಗಳಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...