
ಉತ್ತರ ಪ್ರದೇಶದ ಸಹಾರಾನ್ಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಿಹಾರಿಗಢ ಪೊಲೀಸ್ ಠಾಣೆಯ ಶೇರ್ಪುರ್ ನಿವಾಸಿ ದಿಲ್ಬಹಾರ್ ಜೊತೆ ಗಗಲ್ಹೆಡಿಯ ಹುಡುಗಿ ಜೊತೆ ಮದುವೆ ನಿಶ್ಚಯವಾಗಿತ್ತು. ಮಂಗಳವಾರ ಮದುವೆ ಮೆರವಣಿಗೆ ಬಂದ ತಕ್ಷಣ ಕೇರಳದ ಅಣ್ಣಾಕುಲಂ ಜಿಲ್ಲೆಯ ಯುವತಿ ಮದುವೆ ಸಮಾರಂಭಕ್ಕೆ ನುಗ್ಗಿ ಸಂಚಲನ ಮೂಡಿಸಿದ್ದಾರೆ. ದಿಲ್ಬಹರ್, ಕೇರಳದಲ್ಲಿ ಪೀಠೋಪಕರಣ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಏಳು ವರ್ಷಗಳಿಂದ ಇಬ್ಬರೂ ಸಂಬಂಧದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.
ದಿಲ್ಬಹರ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ, ಆದರೆ ಈಗ ಅವನು ನಿರಾಕರಿಸಿದ್ದಾನೆ ಎಂದು ಯುವತಿ ಹೇಳಿದರಲ್ಲದೇ ಮದುವೆ ಆಗಮಿಸಿದ್ದವರಿಗೆ ದಿಲ್ಬಹಾರ್ ಜೊತೆಗಿನ ಸಂಬಂಧದ ಚಿತ್ರಗಳನ್ನು ಸಹ ತೋರಿಸಿದ್ದಾರೆ. ಅಲ್ಲದೇ ತನ್ನನ್ನು ಮದುವೆಯಾಗಲು ನಿರಾಕರಿಸಿದ ದಿಲ್ಬಹರ್ ವಿರುದ್ಧ ನವೆಂಬರ್ 30 ರಂದು ಕೇರಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಯುವತಿ ತಿಳಿಸಿದ್ದಾಳೆ.
ಘಟನೆ ಬಳಿಕ ವಧುವಿನ ಮನೆಯವರು ತಕ್ಷಣ ಕ್ರಮ ಕೈಗೊಂಡು ವರ ಹಾಗೂ ಆತನ ತಂದೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಜೊತೆಗೆ ಮದುವೆಯನ್ನು ರದ್ದುಗೊಳಿಸಲಾಗಿದೆ. ಪೊಲೀಸರು ದಿಲ್ಬಹಾರ್ ಮತ್ತು ಆತನ ತಂದೆಯ ವಿಚಾರಣೆ ಆರಂಭಿಸಿದ್ದಾರೆ. ಅದೇ ಸಮಯದಲ್ಲಿ, ಯುವತಿ ಪೊಲೀಸ್ ಠಾಣೆಯಲ್ಲಿ ಕುಳಿತು ತನ್ನ ಪ್ರಿಯಕರನೊಂದಿಗೆ ಹೋಗುವ ತನ್ನ ಬೇಡಿಕೆಗೆ ಅಚಲವಾಗಿಯೇ ಇದ್ದಳು. ವಿಷಯ ಗಂಭೀರವಾಗಿದ್ದು, ತಡರಾತ್ರಿಯವರೆಗೂ ಉಭಯ ಪಕ್ಷಗಳ ನಡುವೆ ಇತ್ಯರ್ಥಕ್ಕೆ ಪ್ರಯತ್ನ ಮುಂದುವರಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಅಧಿಕೃತ ದೂರು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
➡️ दिनांक 10.12.2024 को बिहारीगढ से कस्बा गागलहेडी मे बारात लेकर पहुँचे युवक की शादी केरल से आयी एक युवती के द्वारा तथ्य छिपाकर शादी करने का आरोप लगाकर रूकवाये जाने के सम्बन्ध मे #SPCITY_SRR द्वारा दी गयी #बाईट @Uppolice @adgzonemeerut
@digsaharanpur pic.twitter.com/U37nekHk93
— Saharanpur Police (@saharanpurpol) December 10, 2024