ಮಂಗಳವಾರದಂದು ಆಸ್ಪತ್ರೆಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ ಅಂತಾ ಪ್ಯಾಲೆಸ್ಟೇನಿಯಾ ಅಧಿಕಾರಿಗಳು ಹೇಳುವ ಗಾಜಾ ನಗರದಲ್ಲಿರುವ ಅಹ್ಲಿ ಅರಬ್ ಆಸ್ಪತ್ರೆಯು ಸುದೀರ್ಘ ಇತಿಹಾಸವನ್ನು ಹೊಂದಿದೆ ಎನ್ನಲಾಗಿದೆ. ಈ ಆಸ್ಪತ್ರೆಯು ಗಾಜಾ ನಗರದ ದಕ್ಷಿಣ ಭಾಗದಲ್ಲಿ ಬರುತ್ತದೆ ಹಾಗೂ ಇದು ಸಾಕಷ್ಟು ಗಡಿ ಘರ್ಷಣೆಗಳು ಹಾಗೂ ರಾಜಕೀಯ ಪರಿಸ್ಥಿತಿಗಳಿಂದ ಉಂಟಾಗುವ ಆರ್ಥಿಕ ಹಅಗೂ ಪ್ರಾಯೋಗಿಕ ಅಡೆತಡೆಗಳಿಗೆ ಸುದೀರ್ಘ ವರ್ಷಗಳಿಂದ ಸಾಕ್ಷಿಯಾಗಿತ್ತು ಎನ್ನಲಾಗಿದೆ.
ಹಮಾಸ್ ಬಂಡುಕೋರರು ಅಕ್ಟೋಬರ್ 7ರಂದು ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 1700ಕ್ಕೂ ಅಧಿಕ ಜನರು ಸಾವನ್ನಪ್ಪಿದ ಬಳಿಕ ಇಸ್ರೇಲ್ ಹಾಗೂ ಹಮಾಸ್ ನಡುವೆ ಯುದ್ಧ ಆರಂಭಗೊಂಡಿದೆ. ಸದ್ಯ ಇಸ್ರೇಲ್ ಅಕ್ಷರಶಃ ರಣಾರಂಗವಾಗಿ ಮಾರ್ಪಟ್ಟಿದೆ.
ಇಸ್ರೇಲ್ನಲ್ಲಿ ಪ್ರಸ್ತುತ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ ಈ ಆಸ್ಪತ್ರೆಯು ರೋಗಿಗಳಿಗೆ ಸೇವೆ ನೀಡುವ ಜೊತೆಯಲ್ಲಿ ನಿರಾಶ್ರಿತ ಪ್ಯಾಲೆಸ್ಟೇನಿಯರಿಗೂ ಆಶ್ರಯ ನೀಡಿತ್ತು ಎನ್ನಲಾಗಿದೆ. ಈ ಜಾಗದಿಂದ ತೊಲಗುವಂತೆ ಇಸ್ರೇಲ್ ಪ್ಯಾಲಸ್ಟೇನಿಯಾದವರಿಗೆ ಕರೆ ನಿಡಿದ ಬಳಿಕವೂ ಅನೇಕರು ಇದೇ ಆಸ್ಪತ್ರೆಯಲ್ಲಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ.
ಮಂಗಳವಾರ ಸಂಭವಿಸಿದ ಸ್ಪೋಟದ ವಿಚಾರವಅಗಿ ಆರ್ಚ್ ಬಿಷಪ್ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದು ನಮ್ಮ ಸಹೋದರರು ಹಾಗೂ ಸಹೋದರಿಯರ ದುಃಖದೊಂದಿಗೆ ನಾನಿದ್ದೇನೆ. ಅವರಿಗಾಗಿ ನಾವು ಪ್ರಾರ್ಥಿಸೋಣ ಎಂದಿದ್ದಾರೆ.
ಆಸ್ಪತ್ರೆಯನ್ನು ಜೆರುಸಲೆಮ್‌ನ ಎಪಿಸ್ಕೋಪಲ್ ಡಯಾಸಿಸ್ ನಿರ್ವಹಿಸುತ್ತಿತ್ತು ಎನ್ನಲಾಗಿದೆ, ಇದು ಪ್ಯಾಲೇಸ್ಟಿನಿಯನ್ ಪ್ರಾಂತ್ಯಗಳಾದ ಇಸ್ರೇಲ್, ಜೋರ್ಡಾನ್ ಮತ್ತು ಲೆಬನಾನ್‌ನಲ್ಲಿ ಶಾಲೆಗಳು ಮತ್ತು ಚಿಕಿತ್ಸಾಲಯಗಳನ್ನು ಸಹ ನಡೆಸುತ್ತದೆ. ಇದನ್ನು 1882 ರಲ್ಲಿ ಚರ್ಚ್ ಆಫ್ ಇಂಗ್ಲೆಂಡ್‌ನ ವೈದ್ಯಕೀಯ ಮಿಷನರಿಗಳು ಸ್ಥಾಪಿಸಿದರು ಮತ್ತು ಪ್ರಸ್ತುತ ಆಂಗ್ಲಿಕನ್ ಎಪಿಸ್ಕೋಪಲ್ ಚರ್ಚ್‌ನ ಅಧಿಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.