ಬೆಂಗಳೂರು : ಅನಿಶ್ಚಿತವಾಗಿದೆ 24 ಲಕ್ಷ ನೀಟ್ ಆಕಾಂಕ್ಷಿಗಳ ಭವಿಷ್ಯ ! ಬಿಜೆಪಿ ಸರ್ಕಾರ ಏಕೆ ಮೌನವಾಗಿದೆ?ಎನ್ಟಿಎ ಏಕೆ ತುಟಿಕ್ ಪಿಟಿಕ್ ಅಂತಿಲ್ಲ? ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಡಿಸಿಎಂ ಡಿಕೆಶಿ ನೀಟ್ ಫಲಿತಾಂಶದಲ್ಲಿ ಖಂಡಿತವಾಗಿಯೂ ಒಂದು ಮಹಾ ಪ್ರಮಾದವಾಗಿದೆ. ಅದರ ವಿವರಣೆ ಹೀಗಿದೆ.
– ಪರೀಕ್ಷೆ ಬರೆದ 67 ವಿದ್ಯಾರ್ಥಿಗಳು 720/720 ಅಂಕ ಪಡೆದಿದ್ದಾರೆ. ಕಳೆದ ವರ್ಷಗಳಲ್ಲಿ ಕೇವಲ 1 ಅಥವಾ 2 ಟಾಪರ್ಗಳಿದ್ದರು.
– ನೀಟ್ ಪರೀಕ್ಷೆಯಲ್ಲಿ ನೆಗೆಟಿವ್ ಅಂಕಗಳಿದ್ರೂ 67 ಮಂದಿ ಟಾಪರ್ಗಳಾಗಿದ್ದು ಹೇಗೆ?
– 67 ಟಾಪರ್ಗಳ ಪೈಕಿ 44 ಟಾಪರ್ಗಳು ಗ್ರೇಸ್ ಮಾರ್ಕ್ಸ್ ಪಡೆದವರಾಗಿದ್ದಾರೆ.
– ಆಶ್ಚರ್ಯ ಅಂದ್ರೆ, ಟಾಪರ್ಗಳಾಗಿರುವ 62ರಿಂದ 67ರವರೆಗಿನ ಸೀರಿಯಲ್ ಸಂಖ್ಯೆಯ ವಿದ್ಯಾರ್ಥಿಗಳು ಫರೀದಾಬಾದ್ನ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದವರು.
– NEET ಆಕಾಂಕ್ಷಿಗಳಲ್ಲಿ ಹೆಚ್ಚಿನವರು ಒಳ್ಳೆಯ ಹಿನ್ನೆಲೆಯಿಂದ ಬಂದವರು. ಇಂತಹ ಮಹಾ ಪ್ರಮಾದದಿಂದ ಅವರ ಆಕಾಂಕ್ಷೆಗಳಿಗೆ ಪೆಟ್ಟಾಗಿದೆ. ವೈದ್ಯರಾಗುವ ನ್ಯಾಯಯುತ ಅವಕಾಶವನ್ನು ನಿರಾಕರಿಸಲು ಯಾರು ಹೊಣೆಗಾರರಾಗಿದ್ದಾರೆ?
-ನೀಟ್ ಫಲಿತಾಂಶವನ್ನು ಜೂನ್ 14 ರ ಬದಲಿಗಿ ಮುಂಚಿತವಾಗಿ ಜೂನ್ 4 ರಂದು ಏಕೆ ಘೋಷಿಸಲಾಯಿತು?
– ಈ ಮಹಾ ಪ್ರಮಾದದಿಂದಾಗಿ ನೀಟ್ ಪರೀಕ್ಷೆ ಬರೆದ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರಕ್ಕೆ ನಮ್ಮ ಮಕ್ಕಳು ಬಲಿಯಾಗಬೇಕೇ? ಇದಕ್ಕೆ ಹೊಣೆಗಾರರು ಯಾರು?
ಲಕ್ಷಾಂತರ ಮಕ್ಕಳ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರ ಮಾತ್ರ ಕಮಕ್ ಕಿಮಕ್ ಎನ್ನುತ್ತಿಲ್ಲ. ಅತಂತ್ರದಲ್ಲಿ ಸಿಲುಕಿರುವ ನಮ್ಮ ಮಕ್ಕಳ ಹಾಗೂ ದೇಶದ ಈ ಪ್ರಶ್ನೆಗೆ ಈಗಲೇ ಉತ್ತರ ಬೇಕಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.