alex Certify ದಸರಾಗೆ ಬರುವ ಹೆಣ್ಣಾನೆಗಳಿಗೆ ‘ಪ್ರೆಗ್ನೆನ್ಸಿ ಟೆಸ್ಟ್’ ಮಾಡಿಸಲು ಮುಂದಾದ ಅರಣ್ಯ ಇಲಾಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಸರಾಗೆ ಬರುವ ಹೆಣ್ಣಾನೆಗಳಿಗೆ ‘ಪ್ರೆಗ್ನೆನ್ಸಿ ಟೆಸ್ಟ್’ ಮಾಡಿಸಲು ಮುಂದಾದ ಅರಣ್ಯ ಇಲಾಖೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ತಯಾರಿ ಆರಂಭವಾಗಿದೆ. ದಸರಾಗೆ ಬರುವ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಈ ಮೂಲಕ ಈ ಹಿಂದಿನ ಮುಜುಗರ ಘಟನೆಗಳಿಂದ ಅರಣ್ಯ ಇಲಾಖೆ ಎಚ್ಚೆತ್ತಿದೆ.

ಕಳೆದ ಬಾರಿ ಗರ್ಭಿಣಿ ಆನೆಯನ್ನು ದಸರಾ ತಾಲೀಮಿಗೆ ಬಳಸಿ ಅರಣ್ಯ ಇಲಾಖೆ ಮುಜುಗರಕ್ಕೀಡಾಗಿತ್ತು. ಹೀಗಾಗಿ ಈ ಬಾರಿ ಅರಣ್ಯ ಇಲಾಖೆ ಮೊದಲೇ ಎಚ್ಚೆತ್ತುಕೊಂಡಿದ್ದು, ದಸರಾ ತಾಲೀಮಿಗೆ ಕರೆದೊಯ್ಯುವ ಆನೆಗಳ ಪ್ರೆಗ್ನೆನ್ಸಿ ಟೆಸ್ಟಿಗೆ ನಿರ್ಧರಿಸಿದೆ.

ಆನೆಗಳ ಕ್ಯಾಂಪ್ ನಲ್ಲಿ ಪರೀಕ್ಷೆ ಬಳಿಕ ದಸರಾಗೆ ಹೆಣ್ಣಾನೆಗಳನ್ನು ಕರೆದೊಯ್ಯಲಾಗುತ್ತದೆ. ಕಳೆದ ಬಾರಿ ರಾಮಾಪುರ ಕ್ಯಾಂಪ್ ನ ಲಕ್ಷ್ಮೀ ಎಂಬ ಆನೆ ಮರಿಗೆ ಜನ್ಮ ನೀಡಿತ್ತು. ಈ ತಿಂಗಳಾಂತ್ಯಕ್ಕೆ ಆನೆಗಳ ಪಟ್ಟಿ ಸಿದ್ಧವಾಗಲಿದ್ದು, 14 ಆನೆಗಳನ್ನು ದಸರಾಗೆ ಕರೆ ತರಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

ಈ ಬಾರಿ ಅರ್ಜುನ ಹಾಗೂ ಗೋಪಾಲಸ್ವಾಮಿ ಆನೆಗಳು ದಸರಾದಲ್ಲಿ ಭಾಗವಹಿಸುತ್ತಿಲ್ಲ. ಅರ್ಜುನ ಆನೆಗೆ ವಯಸ್ಸಾಗಿರುವ ಕಾರಣ ದಸರಾದಲ್ಲಿ ಭಗವಹಿಸುತ್ತಿಲ್ಲ. ಇನ್ನು ಗೋಪಾಲಸ್ವಾಮಿ ಆನೆ ಕಾಡಾನೆ ದಾಳಿಯಿಂದ ಸಾವನ್ನಪ್ಪಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಈ ಬಾರಿ ಜಂಬೂಸವಾರಿ ನಡೆಯಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...