ಈಗಿನ ಒತ್ತಡದ ಜೀವನ ಶೈಲಿ ಹಾಗೂ ತಪ್ಪಾದ ಆಹಾರ ಪದ್ಧತಿಯಿಂದಾಗಿ ದೇಹದ ಆರೋಗ್ಯದ ಜೊತೆ ಜೊತೆಗೆ ಕೂದಲಿನ ಆರೋಗ್ಯವೂ ಸಂಪೂರ್ಣವಾಗಿ ಹಾಳಾಗುತ್ತೆ . ಅವೈಜ್ಞಾನಿಕವಾದ ನಿದ್ರಾ ಕ್ರಮ ಹಾಗೂ ಆಹಾರ ಪದ್ಧತಿ ಕೂದಲು ದುರ್ಬಲ, ಅವಧಿಗೂ ಮುನ್ನವೇ ಬಿಳಿ ಕೂದಲು ಹಾಗೂ ಕೂದಲು ಉದುರುವಿಕೆ ಶುರುವಾಗುತ್ತದೆ.
ಈ ಎಲ್ಲಾ ಸಮಸ್ಯೆಗಳಿಂದ ನೀವು ಬಳಲುತ್ತಿದ್ದು ದುಬಾರಿ ಶಾಂಪೂಗಳನ್ನ ಬಳಸಿ ಸುಸ್ತಾಗಿ ಹೋದವರಲ್ಲಿ ನೀವು ಕೂಡ ಒಬ್ಬರಾಗಿದ್ದರೆ ಈ ಸ್ಟೋರಿ ಖಂಡಿತ ನಿಮಗೆ ಸಹಾಯಕವಾಗಬಲ್ಲದು. ದಾಸವಾಳ ಮತ್ತು ದಾಸವಾಳದ ಎಲೆ ನಿಮ್ಮ ಕೂದಲು ಉದುರುವಿಕೆ ಕಡಿಮೆ ಮಾಡೋದ್ರ ಜೊತೆಗೆ ಅದನ್ನ ಬಲಶಾಲಿ ಮಾಡಲಿದೆ.
ದಾಸವಾಳ ಹಾಗೂ ಅದರ ಎಲೆಯನ್ನ ನುಣ್ಣಗೆ ರುಬ್ಬಿಕೊಳ್ಳಿ ಇದಕ್ಕೆ ಮೊಸರನ್ನ ಸೇರಿಸಿ. ಈ ಮಿಶ್ರಣವನ್ನ ತಲೆಗೆ ಹಾಕಿಕೊಂಡು ಒಂದು ಗಂಟೆಗಳ ಬಳಿಕ ಶಾಂಪೂವನ್ನ ಬಳಸಿ ತಲೆಯನ್ನ ತೊಳೆದುಕೊಳ್ಳಿ. ವಾರಕ್ಕೆ ಎರಡು ಬಾರಿ ಬಾರಿ ನೀವು ಈ ರೀತಿ ಮಾಡಬಹುದು. ಕೇವಲ ದಾಸವಾಳ ಹಾಗೂ ಎಲೆಯನ್ನ ಮಾತ್ರ ಬಳಸಿ ಹೇರ್ ಪ್ಯಾಕ್ ಮಾಡಬಹುದಾಗಿದೆ.
ದಾಸವಾಳ ಹಾಗೂ ಎಲೆಯಿಂದ ಹೇರ್ ಪ್ಯಾಕ್ ಮಾತ್ರವಲ್ಲ ಎಣ್ಣೆಯನ್ನೂ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು 8 ದಾಸವಾಳದ ಎಲೆಯನ್ನ ತೆಗೆದುಕೊಳ್ಳಿ. ಇದನ್ನ ಚೆನ್ನಾಗಿ ತೊಳೆದು ಬಳಿಕ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಒಂದು ಕಪ್ ಕೊಬ್ಬರಿ ಎಣ್ಣೆಯನ್ನ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ಬಳಿಕ ಅದನ್ನ ಇನ್ನೊಂದು ಪಾತ್ರೆಗೆ ಸೋಸಿಕೊಳ್ಳಿ. ಈ ಎಣ್ಣೆ ತಣ್ಣಗಾದ ಬಳಿಕ ನೀವು ಇದನ್ನ ವಾರದಲ್ಲಿ ಮೂರು ದಿನ ಬಳಕೆ ಮಾಡಬಹುದಾಗಿದೆ.