ಅನೇಕರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗಲು ಋತುಬಂಧವೂ ಕಾರಣವಾಗಿರುತ್ತದೆ. ಇದೀಗ ಬ್ರಿಟನ್‌ನ ವಿವಿಯೊಂದು ಈ ಸಮಸ್ಯೆಯನ್ನು ಪರಿಹರಿಸಲು, ಟೆಸ್ಟೋಸ್ಟೆರೋನ್‌ಗಳ ಬಗ್ಗೆ ಅಧ್ಯಯನಕ್ಕೆ ಮುಂದಾಗಿದೆ.
ಸಾಮಾನ್ಯವಾಗಿ ಮಹಿಳೆಯರಲ್ಲಿ ಸಣ್ಣ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಟೆಸ್ಟೋಸ್ಟೆರೋನ್‌ನ ಮಟ್ಟವು ಋತುಬಂಧದ ವೇಳೆ ತಗ್ಗುತ್ತದೆ. ಈ ಟೆಸ್ಟೋಸ್ಟೆರೋನ್‌ಗಳು ಸ್ನಾಯುಗಳು, ಮೂಳೆ, ಗ್ರಹಿಕಾ ಶಕ್ತಿ ಹಾಗೂ ಲೈಂಗಿಕಾಸಕ್ತಿಗಳ ಆರೋಗ್ಯವನ್ನು ನಿರ್ಧರಿಸುತ್ತವೆ. ಋತುಬಂಧದ ಸಾಮಾನ್ಯ ಲಕ್ಷಣಗಳನ್ನು ಎದುರಿಸಲು ಅನೇಕ ಮಹಿಳೆಯರು ಹಾರ್ಮೋನ್ ಬದಲಾವಣೆ ಚಿಕಿತ್ಸೆ (ಎಚ್‌ಆರ್‌ಟಿ) ಪಡೆಯುತ್ತಾರೆ.
ಟೆಸ್ಟೋಸ್ಟೆರೋನ್ ಜೆಲ್‌ಗಳು ಹಾಗೂ ಕ್ರೀಮ್‌ಗಳು ಬಹಳಷ್ಟು ಲಭ್ಯವಿದ್ದರೂ ಸಹ ಇವುಗಳೆಲ್ಲಾ ಸಾಮಾನ್ಯವಾಗಿ ಪುರುಷ ಕೇಂದ್ರಿತವಾಗಿರುತ್ತವೆ.
ಈ ಸಮಸ್ಯೆಗೆ ಪರಿಹಾರವಾಗಿ, ಋತುಬಂಧದ ವೇಳೆ ಧರಿಸಲು ವಿಶಿಷ್ಟವಾದ ಟೆಸ್ಟೋಸ್ಟೆರೋನ್ ಪ್ಯಾಚ್ ಒಂದನ್ನು ವಾರ್ವಿಕ್ ವಿವಿ ಅಭಿವೃದ್ಧಿಪಡಿಸಿದೆ. 2023ರಲ್ಲಿ ಈ ಪ್ಯಾಚ್‌ನ ಮೊದಲ ವೈದ್ಯಕೀಯ ಪ್ರಯೋಗ ನಡೆಸಲಾಗುವುದು. ಋತುಬಂಧದ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಸದ್ಯದ ಮಟ್ಟಿಗೆ ಮಹಿಳೆಯರಿಗೆಂದು ವೈದ್ಯಕೀಯವಾಗಿ ಅನುಮೋದಿಸಲ್ಪಟ್ಟ ಯಾವುದೇ ಟೆಸ್ಟೋಸ್ಟೆರಾನ್ ಪ್ಯಾಚ್‌ಗಳು ಲಭ್ಯವಿಲ್ಲ.