ಈಗಾಗಲೇ ತನ್ನ ಟೀಸರ್ ನಿಂದಲೇ ಪ್ರೇಕ್ಷಕರ ಗಮನ ಸೆಳೆದಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ‘ರಾಕ್ಷಸ’ ಚಿತ್ರದ ಮೊದಲ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ‘ರಾ ರಾ ರಾಕ್ಷಸ’ ಎಂಬ ಈ ಹಾಡಿಗೆ ವರುಣ್ ಉನ್ನಿ ಧ್ವನಿಯಾಗುವ ಮೂಲಕ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಧನಂಜಯ್ ರಂಜನ್ ಅವರ ಸಾಹಿತ್ಯವಿದೆ.
ಲೋಹಿತ್ ಎಚ್ ನಿರ್ದೇಶನದ ಹಾರರ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಶಾನ್ವಿ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ದೀಪು ಬಿ.ಎಸ್. ನಿರ್ಮಾಣ ಮಾಡಿದ್ದು, ಸಿ. ರವಿಚಂದ್ರನ್ ಸಂಕಲನ, ಜೆಬಿನ್ ಪಿ ಜಾಕೋಬ್ ಛಾಯಾಗ್ರಾಹಣ, ಗುರುಕಶ್ಯಪ್ ಮತ್ತು ರಾಕ್ ಸ್ಟಿಲ್ಸ್ ವಿನೋದ್ ಸಂಭಾಷಣೆ ಹಾಗೂ ವಿನೋದ್, ರಿಯಲ್ ಸತೀಶ್ ಸಾಹಸ ನಿರ್ದೇಶನವಿದೆ.