
ಸಂಜಿತ್ ಹೆಗಡೆ ಈ ಹಾಡಿಗೆ ಧ್ವನಿಯಾಗಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಯೋಗರಾಜ್ ಭಟ್ ಅವರ ಸಾಹಿತ್ಯವಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಮುಂಗಾರು ಮಳೆ’ ಬಿಡುಗಡೆಯಾಗಿ ಡಿಸೆಂಬರ್ 29ಕ್ಕೆ 18 ವರ್ಷಗಳಾಗಲಿದ್ದು, ಇದರ ಸವಿನೆನಪಿಗಾಗಿ ಈ ಹಾಡನ್ನು ರಿಲೀಸ್ ಮಾಡಲಾಗುತ್ತಿದೆ ಎಂದು ಯೋಗರಾಜ್ ಭಟ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದಾರೆ.
ಈ ಚಿತ್ರವನ್ನು E. ಕೃಷ್ಣಪ್ಪ ತಮ್ಮ EK ಎಂಟರ್ಟೈನರ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದು, ಸುಮುಖ ಸೇರಿದಂತೆ ರಾಶಿಕಾ ಶೆಟ್ಟಿ, ಅಂಜಲಿ ಅನೀಶ್, ರಂಗಾಯಣ ರಘು ಮತ್ತು ದತ್ತಣ್ಣ ಬಣ್ಣ ಹಚ್ಚಿದ್ದಾರೆ. KM ಪ್ರಕಾಶ್ ಸಂಕಲನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ವಿ ಮುರಳಿ, ಕಂಬಿ ರಾಜು ಮತ್ತು ಗೀತಾ ಅವರ ನೃತ್ಯ ನಿರ್ದೇಶನವಿದೆ.
View this post on Instagram