
ಗಿರೀಶ್ ಮೂಲಿಮನಿ ನಿರ್ದೇಶನದ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಸೇರಿದಂತೆ ರಚಿಲ್ ಡೇವಿಡ್, ಪ್ರಮೋದ್, ಪೊನ್ನು ಅಶ್ವತಿ, ಶರತ್ ಲೋಹಿತಾಶ್ವ, ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ, ಎಸ್ ವಿ ಸಿ ಫಿಲಂಸ್ ಬ್ಯಾನರ್ ನಲ್ಲಿ ಎಮ್ ಮುನೇಗೌಡ ನಿರ್ಮಾಣ ಮಾಡಿದ್ದು, ಗುಮ್ಮನೇನಿ ವಿಜಯ್ ಸಂಗೀತ ಸಂಯೋಜನೆ ನೀಡಿದ್ದಾರೆ, ಸುನೀಲ್ ಕಶ್ಯಪ್ ಸಂಕಲನ, ಉದಯ್ ಲೀಲಾ ಛಾಯಾಗ್ರಹಣ, ಗಿರೀಶ್ ಮೂಲಿಮನಿ ಹಾಗೂ ಪ್ರಸನ್ನ ಎಂ ಅವರ ಸಂಭಾಷಣೆ, ಹಾಗೂ ಡಾಕ್ಟರ್ ಕೆ ರವಿವರ್ಮ, ಥ್ರಿಲ್ಲರ್ ಮಂಜು, ಅರ್ಜುನ್ ರಾಜ್ ಮತ್ತು ನರಸಿಂಹ ಅವರ ಸಾಹಸ ನಿರ್ದೇಶನವಿದೆ.