ರಾಘವ್ ನಾಯಕ್ ಮತ್ತು ಪ್ರಶಾಂತ್ ರಾಜ್ ರಚಿಸಿ ನಿರ್ದೇಶಿಸಿರುವ ‘O2’ ಚಿತ್ರದ ಮೊದಲ ಹಾಡು ಇಂದು ಪಿಆರ್ ಕೆ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ”ನಿನಗಾಗಿ” ಎಂಬ ಈ ಹಾಡಿಗೆ ಸಂಜೀತ್ ಹೆಗಡೆ ಧ್ವನಿಯಾಗಿದ್ದು, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ವಿವನ್ ರಾಧಾಕೃಷ್ಣ ಸಂಗೀತ ಸಂಯೋಜನೆ ನೀಡಿದ್ದಾರೆ.
ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ಸೇರಿದಂತೆ ಪ್ರವೀಣ್ ತೇಜ್, ರಾಘವ್ ನಾಯಕ್, ಪ್ರಶಾಂತ್ ಬೆಳವಾಡಿ, ಶ್ರೀಧರ್, ಗೋಪಾಲಕೃಷ್ಣ ದೇಶಪಾಂಡೆ, ಸಿರಿ ರವಿಕುಮಾರ್ ತೆರೆ ಹಂಚಿಕೊಂಡಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಣ ಮಾಡಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ, ದಿವಾಕರ್ ಕಲಾ ನಿರ್ದೇಶನ, ನವೀನ್ ಕುಮಾರ್ ಎಸ್. ಛಾಯಾಗ್ರಹಣವಿದೆ, ಇದೇ ಏಪ್ರಿಲ್ 19ಕ್ಕೆ ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ.