ಮೊದಲ ವಿಶ್ವ ಸುಂದರಿ ಕಿಕಿ ಹಾಕಾನ್ಸನ್ ನವೆಂಬರ್ 4 ರಂದು ಕ್ಯಾಲಿಫೋರ್ನಿಯಾದಲ್ಲಿ ತಮ್ಮ 95 ನೇ ವಯಸ್ಸಿನಲ್ಲಿ ನಿಧನರಾದರು.
ಅವರ ನಿಧನವನ್ನು ವಿಶ್ವ ಸುಂದರಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ದೃಢಪಡಿಸಿದ್ದಾರೆ. “ಮೊದಲ ವಿಶ್ವ ಸುಂದರಿ, ಸ್ವೀಡನ್ನ ಕಿಕಿ ಹಾಕನ್ಸನ್ ನವೆಂಬರ್ 4, ಸೋಮವಾರ ಕ್ಯಾಲಿಫೋರ್ನಿಯಾದ ತಮ್ಮ ಮನೆಯಲ್ಲಿ ಶಾಂತಿಯುತವಾಗಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಕಿಕಿ ನಿದ್ರೆಯಲ್ಲಿ ತೀರಿಕೊಂಡಳು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಸ್ವೀಡನ್ನ ಕಿಕಿ ಹಾಕಾನ್ಸನ್ರನ್ನು ಮಿಸ್ ವರ್ಲ್ಡ್ 1951 ಎಂದು ಘೋಷಿಸಲಾಯಿತು. ಇದು ಸ್ಪರ್ಧೆಯ ಇತಿಹಾಸದಲ್ಲಿ ಸ್ವೀಡನ್ನ ಮೊದಲ ವಿಜಯವಾಗಿದೆ. ಬಿಕಿನಿಯನ್ನು ಧರಿಸಿ ಕಿರೀಟವನ್ನು ಅಲಂಕರಿಸಿದ ಏಕೈಕ ವಿಜೇತ ಕೂಡ ಹಕಾನ್ಸನ್. ಆಗಿದ್ದರು. ಈ ವರ್ಷದ ಸ್ಪರ್ಧೆಯಲ್ಲಿ ಏಳು ದೇಶಗಳ ಇಪ್ಪತ್ತೇಳು ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯನ್ನು ಎರಿಕ್ ಮೋರ್ಲಿ ಆಯೋಜಿಸಿದ್ದರು.
ಜೂನ್ 17, 1929 ರಂದು ಲಂಡನ್ನಲ್ಲಿ ಜನಿಸಿದ ಕಿಕಿ 1951 ರಲ್ಲಿ ಮಿಸ್ ಸ್ವೀಡನ್ ವರ್ಲ್ಡ್ ಸ್ಪರ್ಧೆಯನ್ನು ಗೆದ್ದರು,. 29 ಜುಲೈ 1951 ರಂದು ಲೈಸಿಯಮ್ ಬಾಲ್ರೂಮ್ನಲ್ಲಿ ಪ್ರಶಸ್ತಿಯನ್ನು ಗೆದ್ದಾಗ ಅವರಿಗೆ 23 ವರ್ಷ. ಆಗಿತ್ತು. “ಅವರು ವಿಶ್ವ ಸುಂದರಿ ಕಿರೀಟವನ್ನು ಗೆದ್ದರೂ, ಸಂಘಟಕ ಎರಿಕ್ ಮಾರ್ಲೆ ಬ್ರಿಟಿಷ್ ಉತ್ಸವದಲ್ಲಿ ಈಜುಡುಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದರಿಂದ ಸ್ಪರ್ಧೆಯನ್ನು ಫೆಸ್ಟಿವಲ್ ಬಿಕಿನಿ ಸ್ಪರ್ಧೆ ಎಂದು ಹೆಸರಿಸಲಾಯಿತು. ಅವರು ಬಿಕಿನಿಯಲ್ಲಿ ಕಿರೀಟ ಧರಿಸಿದ್ದರು, ಇದನ್ನು ಪೋಪ್ 12 ನೇ ಪಿಯಸ್ ಸಹ ತಿರಸ್ಕರಿಸಿದರು ಮತ್ತು ಖಂಡಿಸಿದರು” ಎಂದು ದಿ ವೀಕ್ ವರದಿ ಮಾಡಿತ್ತು.
ಕಿಕಿ ಹಕಾನ್ಸನ್ ಅವರ ಸಾವು ಮಿಸ್ ವರ್ಲ್ಡ್ ಸ್ಪರ್ಧೆಯ ಯುಗದ ಅಂತ್ಯವನ್ನು ಸೂಚಿಸುತ್ತದೆ ಆದರೆ ಮೊದಲ ವಿಜೇತರಾಗಿ ಅವರ ಪರಂಪರೆ ಮುಂದಿನ ತಲೆಮಾರುಗಳವರೆಗೆ ಜೀವಂತವಾಗಿರುತ್ತದೆ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ.