
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ‘ಅನಿಮಲ್’ ಚಿತ್ರದ ಟೀಸರ್ ಇದೇ ಸೆಪ್ಟೆಂಬರ್ 28 ರಂದು ರಿಲೀಸ್ ಅಗಲಿದ್ದು, ಇಂದು ಅನಿಮಲ್ ಚಿತ್ರತಂಡ ನಟಿ ರಶ್ಮಿಕಾ ಮಂದಣ್ಣ ಅವರ ಪಾತ್ರವನ್ನು ರಿವೀಲ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ಗೀತಾಂಜಲಿ ಎಂಬ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ರಣಬೀರ್ ಕಪೂರ್ ಸೇರಿದಂತೆ ಬಾಬಿ ಡಿಯೋಲ್, ಅನಿಲ್ ಕಪೂರ್, ರಶ್ಮಿಕ ಮಂದಣ್ಣ, ಶಕ್ತಿ ಕಪೂರ್, ಸುರೇಶ್ ಒಬೆರಾಯ್, ಸೌರಭ್ ಸಚ್ದೇವ್, ರಬಿ ಲಮಿಚಾನೆ ಬಣ್ಣ ಹಚ್ಚಿದ್ದಾರೆ. ಟಿ ಸೀರೀಸ್ ಫಿಲಂಸ್, ಭದ್ರಕಾಳಿ ಪಿಚ್ಚರ್ಸ್, ಸಿನಿ ಸ್ಟುಡಿಯೋಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ. ಡಿಸೆಂಬರ್ 1ರಂದು ಈ ಸಿನಿಮಾ ತೆರೆ ಕಾಣಲಿದೆ.