
ಈಗಾಗಲೇ ತನ್ನ ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಟಾಲಿವುಡ್ ನ ಬಹುನಿರೀಕ್ಷಿತ ‘ಕೃಷ್ಣಮ್ಮ’ ಚಿತ್ರ ಇದೇ ಮೇ ಹತ್ತಕ್ಕೆ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ. ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಮೇ 3 ಕ್ಕೆ ಈ ಸಿನಿಮಾ ಬಿಡುಗಡೆ ಆಗಬೇಕಿತ್ತು ಕಾರಣಾಂತರದಿಂದ ಮುಂದೂಡಲಾಗಿದೆ.
ವಿ ವಿ ಗೋಪಾಲ ನಿರ್ದೇಶನದ ಈ ಚಿತ್ರವನ್ನು ಅರುಣಾಚಲ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಕೃಷ್ಣ ಕೊಮ್ಮಲಾ ಪಾಟೀ ನಿರ್ಮಾಣ ಮಾಡಿದ್ದು, ಸತ್ಯದೇವ್, ಅರ್ಚನಾ, ಕೃಷ್ಣ ಬುರುಗುಲ, ಅತಿರ ರಾಜ್, ಲಕ್ಷ್ಮಣ್ ಮೀಸಲಾ, ಪ್ರಮುಖ ಪಾತ್ರದಲ್ಲಿದ್ದಾರೆ. ಸನ್ನಿ ಕುರುಪಾಠಿ ಛಾಯಾಗ್ರಹಣ, ತಮ್ಮಿ ರಾಜು ಸಂಕಲನ, ಪೃದ್ವಿ ಶೇಖರ್ ಸಾಹಸ ನಿರ್ದೇಶನವಿದೆ. ಕಾಲಭೈರವ ಸಂಗೀತ ಸಂಯೋಜನೆ ನೀಡಿದ್ದಾರೆ.