
ಅಶೋಕ್ ಸಾಮ್ರಾಟ್ ಕಥೆ ಬರೆದು ನಿರ್ದೇಶಿಸಿರುವ ‘ಅವನಿರಬೇಕಿತ್ತು’ ಸಿನಿಮಾ ಈಗಾಗಲೇ ತನ್ನ ಫಸ್ಟ್ ಲುಕ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಚಿತ್ರ ತಂಡ ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದೆ. ಇಂದು ಶಿವರಾತ್ರಿ ಹಬ್ಬಕ್ಕೆ ವಿಶೇಷ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ.
ಈ ಚಿತ್ರದಲ್ಲಿ ಭರತ್ ಮತ್ತು ಸೌಮ್ಯ ಜಾನ್ ಪ್ರಮುಖ ಪಾತ್ರದಲ್ಲಿದ್ದು, ಅಜಯ್ ಶರ್ಮಾ, ಅಶೋಕ್ ಸಾಮ್ರಾಟ್, ಬಸವ, ಶಿವಾನಂದ ಆಚಾರ್ಯ, ರಂಗ, ನಂದ ಹೊನ್ನೂರು, ಅಭಿ ಕುಣಿಗಲ್ ಉಳಿದ ಪಾತ್ರವರ್ಗದಲ್ಲಿದ್ದಾರೆ.
ನೋವಿಕ ಸಿನಿ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಮುರಳಿ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಅಶೋಕ್ ಸಾಮ್ರಾಟ್ ಅವರ ಸಂಕಲನ, ಮತ್ತು ಪೃಥ್ವಿ ಮಾಲೂರ್ ಛಾಯಾಗ್ರಹಣವಿದೆ.
