ಗರ್ಭಾವಸ್ಥೆಯಲ್ಲಿ ಹಾಗೂ ಒಂದು ವರ್ಷದವರೆಗೆ ಕುಟುಂಬದ ವಾತಾವರಣ ಮಗುವಿನ ಭಾವನಾತ್ಮಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಸಂಶೋಧನೆ ಈ ವಿಷಯವನ್ನು ದೃಢಪಡಿಸಿತ್ತು. ಸಂಶೋಧನೆ ಪ್ರಕಾರ ಮಗುವಿನ ಭಾವನಾತ್ಮಕ ವಿಕಾಸ ತಾಯಿ, ಮಗುವಿನ ಸಂಬಂಧದ ಜೊತೆಗೆ ಕುಟುಂಬದ ಪ್ರಾಮುಖ್ಯತೆಯನ್ನು ಬಹಿರಂಗಪಡಿಸಿದೆ.
ವಿಶ್ವವಿದ್ಯಾನಿಲಯವೊಂದು ಈ ಬಗ್ಗೆ ಸಂಶೋಧನೆ ನಡೆಸಿತ್ತು. ಬೇರೆ ಬೇರೆ ಕುಟುಂಬದ 10 ವರ್ಷದ ಸುಮಾರು 79 ಮಕ್ಕಳ ಮೇಲೆ ಸಂಶೋಧನೆ ನಡೆಸಲಾಗಿದೆ. ಮಕ್ಕಳಿಗೆ ದುಃಖದ ಹಾಗೂ ಸಂತೋಷದ ಫೋಟೋಗಳನ್ನು ತೋರಿಸಲಾಗಿತ್ತು. ಮಕ್ಕಳ ಪ್ರತಿಕ್ರಿಯೆಯನ್ನು ಭಾವನಾತ್ಮಕವಾಗಿ ಅರ್ಥೈಸಲಾಯಿತು.