ಬಿಹಾರದ ಜಾತಿ ಗಣತಿಯ ವೇಳೆ ಒಂದಷ್ಟು ಆಸಕ್ತಿಕರ ವಿಚಾರಗಳು ಹೊರ ಬಂದಿವೆ. ಬಿಹಾರದ ಅರ್ವಾಲ್‌ನ 40 ಮಹಿಳೆಯರಿಗೆ ಒಬ್ಬನೇ ಪತಿ, ರೂಪ್‌ಚಂದ್, ಇರುವುದು ಕಂಡು ಬಂದಿದೆ.
ಅರ್ವಾಲ್‌ನ 7ನೇ ವಾರ್ಡ್‌ನಲ್ಲಿರುವ ರೆಡ್‌ಲೈಟ್ ಏರಿಯಾ ನಿವಾಸಿಗಳಾದ ಈ ಮಹಿಳೆಯರೆಲ್ಲ ತಮ್ಮ ಪತಿಯ ಹೆಸರನ್ನು ರೂಪ್‌ಚಂದ್ ಎಂದೇ ಕೊಟ್ಟಿದ್ದಾರೆ. ಇವರು ತಮ್ಮ ಮಕ್ಕಳ ಹೆಸರನ್ನೂ ಸಹ ಆಧಾರ್ ಕಾರ್ಡ್‌ಗಳಲ್ಲಿ ತಂದೆಯ ಹೆಸರನ್ನು ರೂಪ್‌ಚಂದ್ ಎಂದೇ ಬರೆಸಿದ್ದಾರೆ.
ವರದಿಗಳ ಪ್ರಕಾರ, ರೂಪ್‌ಚಂದ್ ಎಂಬುದು ನಿಜ ವ್ಯಕ್ತಿಯ ಹೆಸರಲ್ಲ, ರೆಡ್ ಲೈಟ್ ಏರಿಯಾದಲ್ಲಿ ವಾಸಿಸುವ ಇವರುಗಳಿಗೆ ಪತಿ ಹೆಸರು ಇಲ್ಲದ ಕಾರಣ ಎಲ್ಲರೂ ರೂಪ್ ಚಂದ್ ಹೆಸರನ್ನೇ ಬರೆಸಿದ್ದಾರೆ ಎನ್ನಲಾಗಿದೆ.
ಈ ವರ್ಷದ ಜನವರಿಯಿಂದ ಎರಡು ಹಂತಗಳಲ್ಲಿ ಬಿಹಾರವು ಜಾತಿ ಗಣತಿ ನಡೆಸಲು ಮುಂದಾಗಿದೆ. ಮಾರ್ಚ್‌ನಲ್ಲಿ ಜಾತಿ ಗಣತಿಯ ಮೊದಲ ಹಂತ ಪೂರ್ಣಗೊಂಡಿದೆ. ಏಪ್ರಿಲ್ 15ರಿಂದ ಎರಡನೇ ಹಂತದ ಜಾತಿಗಣತಿ ಅರಂಭಗೊಂಡಿದೆ.