alex Certify ʻಐತಿಹಾಸಿಕ ಕ್ಷಣಕ್ಕೆ ದೇಶವೇ ಕಾಯುತ್ತಿದೆʼ : ರಾಮಮಂದಿರ ಉದ್ಘಾಟನೆ ಬಗ್ಗೆ ಪ್ರಧಾನಿ ಮೋದಿ ಆಡಿಯೋ ಸಂದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʻಐತಿಹಾಸಿಕ ಕ್ಷಣಕ್ಕೆ ದೇಶವೇ ಕಾಯುತ್ತಿದೆʼ : ರಾಮಮಂದಿರ ಉದ್ಘಾಟನೆ ಬಗ್ಗೆ ಪ್ರಧಾನಿ ಮೋದಿ ಆಡಿಯೋ ಸಂದೇಶ

ನವದೆಹಲಿ: ರಾಮ ಮಂದಿರದಲ್ಲಿ ರಾಮ್ ಲಲ್ಲಾ ಅವರ ಪ್ರಾಣ ಪ್ರತಿಷ್ಠಾಪನೆಗೆ 11 ದಿನಗಳು ಬಾಕಿ ಇರುವಾಗ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಿಶೇಷ ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.

ಈ ಕುರಿತು ಎಕ್ಸ್‌ ನಲ್ಲಿ ಆಡಿಯೋ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ,  ಜನವರಿ 22 ರವರೆಗೆ 11 ದಿನಗಳ ವಿಶೇಷ ಆಚರಣೆಗಳನ್ನು ಪ್ರಾರಂಭಿಸುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು.

ಅಯೋಧ್ಯೆಯಲ್ಲಿ ರಾಮ್ ಲಾಲಾ ಪ್ರತಿಷ್ಠಾಪನೆಗೆ ಕೇವಲ 11 ದಿನಗಳು ಮಾತ್ರ ಉಳಿದಿವೆ. ಈ ಶುಭ ಸಂದರ್ಭಕ್ಕೆ ನಾನೂ ಸಾಕ್ಷಿಯಾಗುತ್ತಿರುವುದು ನನ್ನ ಅದೃಷ್ಟ. ಪ್ರತಿಷ್ಠಾಪನೆಯ ಸಮಯದಲ್ಲಿ ಭಾರತದ ಎಲ್ಲಾ ಜನರನ್ನು ಪ್ರತಿನಿಧಿಸಲು ಭಗವಂತ ನನ್ನನ್ನು ಒಂದು ಸಾಧನವನ್ನಾಗಿ ಮಾಡಿದ್ದಾನೆ. ಇದನ್ನು ಗಮನದಲ್ಲಿಟ್ಟುಕೊಂಡು, ನಾನು ಇಂದಿನಿಂದ 11 ದಿನಗಳ ವಿಶೇಷ ಆಚರಣೆಯನ್ನು ಪ್ರಾರಂಭಿಸುತ್ತಿದ್ದೇನೆ. ನಾನು ಎಲ್ಲಾ ಜನರಿಂದ ಆಶೀರ್ವಾದ ಪಡೆಯುತ್ತಿದ್ದೇನೆ. ಈ ಸಮಯದಲ್ಲಿ, ನನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ತುಂಬಾ ಕಷ್ಟ, ಆದರೆ ನಾನು ನನ್ನ ಕಡೆಯಿಂದ ಪ್ರಯತ್ನಿಸಿದ್ದೇನೆ” ಎಂದು ಅವರು ಆಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...