ಕರ್ಟನ್‌ಗಳು ಮನೆಯ ಇಂಟೀರಿಯರ್‌ಗೆ ತಕ್ಕಂತಿರಬೇಕು ಎಂದು ಎಲ್ಲರೂ ಬಯಸ್ತಾರೆ. ಮನೆಯ ಬಣ್ಣಕ್ಕೆ ಮ್ಯಾಚಿಂಗ್ ಆಗಿರುವ ಸುಂದರ ಕರ್ಟನ್‌ಗಳನ್ನು ಆಯ್ಕೆ ಮಾಡಿಕೊಳ್ತಾರೆ. ಆದರೆ ಕರ್ಟನ್ ಅಳವಡಿಕೆಗೆ ಕೂಡ ವಾಸ್ತುಶಾಸ್ತ್ರದಲ್ಲಿ ಕೆಲವು ವಿಶೇಷ ನಿಯಮಗಳಿವೆ. ಈ ನಿಯಮಗಳನ್ನು ಅನುಸರಿಸದೇ ಇದ್ದಲ್ಲಿ ಸಮಸ್ಯೆಗಳಾಗಬಹುದು.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ಧನಾತ್ಮಕ ಅಥವಾ ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತದೆ. ಇದು ಮನೆಯಲ್ಲಿ ವಾಸಿಸುವ ಸದಸ್ಯರ ಮೇಲೂ ಪರಿಣಾಮ ಬೀರುತ್ತದೆ. ಮನೆಯಲ್ಲಿ ಅಳವಡಿಸಿರುವ ಕರ್ಟನ್‌ಗಳು ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಸೂರ್ಯನ ಬೆಳಕು ಮತ್ತು ಧೂಳಿನಿಂದ ಮನೆಯನ್ನು ರಕ್ಷಿಸುತ್ತವೆ. ಮನೆಯ ಯಾವ ಕೋಣೆಯಲ್ಲಿ ಯಾವ ರೀತಿಯ ಕರ್ಟನ್ ಅಳವಡಿಸಬೇಕು ಎಂಬುದನ್ನು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.
ಡ್ರಾಯಿಂಗ್ ರೂಮಿನ ಪರದೆ
ಮನೆಯಲ್ಲಿ ಅತಿಥಿಗಳಿಗಾಗಿ ಡ್ರಾಯಿಂಗ್ ರೂಮ್ ಅಥವಾ ಪ್ರತ್ಯೇಕ ಕೊಠಡಿ ಇದ್ದರೆ ಅಲ್ಲಿ ಬಾದಾಮಿ ಅಥವಾ ಕೆನೆ ಬಣ್ಣದ ಪರದೆಗಳನ್ನು ಅಳವಡಿಸಬೇಕು. ಇದು ಮನೆಯನ್ನು ಉತ್ಸಾಹಭರಿತವಾಗಿಡುತ್ತದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.
ಮನೆಯ ಯಜಮಾನನ ಕೊಠಡಿ
ಮನೆಯ ಮುಖ್ಯಸ್ಥರ ಕೋಣೆಯಲ್ಲಿ ಕಿಟಕಿಗಳು ಮತ್ತು ಬಾಗಿಲುಗಳಿಗೆ ನೀಲಿ, ಕಂದು ಅಥವಾ ಕಿತ್ತಳೆ ಬಣ್ಣದ ಪರದೆಗಳನ್ನು ಹಾಕಬೇಕು. ಇದರಿಂದ ಮನೆಯ ಯಜಮಾನನ ಆರೋಗ್ಯ ಉತ್ತಮವಾಗಿರುತ್ತದೆ. ಇಡೀ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿರುತ್ತದೆ. ಈ ಬಣ್ಣಗಳ ಪ್ರಭಾವದಿಂದ ಮನೆಯ ಸದಸ್ಯರು ಪ್ರಗತಿ ಹೊಂದುತ್ತಾರೆ.
ಮಲಗುವ ಕೋಣೆಯ ಕರ್ಟನ್
ನವ ದಂಪತಿಗಳು ಪರದೆಗಳ ಬಣ್ಣದ ಆಯ್ಕೆಗೆ ವಿಶೇಷ ಗಮನ ಕೊಡಬೇಕು. ಮಲಗುವ ಕೋಣೆಯಲ್ಲಿ ಕೆಂಪು, ನೇರಳೆ ಅಥವಾ ಗುಲಾಬಿ ಬಣ್ಣದ ಪರದೆಗಳನ್ನು ಹಾಕಬೇಕು. ಇದು ದಾಂಪತ್ಯ ಜೀವನದಲ್ಲಿ ಹೊಸ ಚೈತನ್ಯವನ್ನು ತರುತ್ತದೆ. ಪತಿ ಮತ್ತು ಪತ್ನಿ ನಡುವೆ ಪ್ರಣಯ ಹೆಚ್ಚಾಗುತ್ತದೆ.
ಅಧ್ಯಯನ ಕೊಠಡಿಯ ಪರದೆ
ಮಕ್ಕಳು ಓದುವ ಕೋಣೆಯಲ್ಲಿ ಹಸಿರು, ನೀಲಿ ಅಥವಾ ಗುಲಾಬಿ ಬಣ್ಣದ ಪರದೆಗಳನ್ನು ಅಳವಡಿಸಿ. ಈ ಬಣ್ಣಗಳನ್ನು ಶಾಂತಿ ಮತ್ತು ಆರೋಗ್ಯದ ಸೂಚಕಗಳು ಎಂದು ಪರಿಗಣಿಸಲಾಗುತ್ತದೆ. ಸ್ಟಡಿ ರೂಂ ಇದ್ದರೆ ಅಲ್ಲಿ ಹಸಿರು ಬಣ್ಣದ ಕರ್ಟನ್ ಹಾಕುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ. ಮಕ್ಕಳು ಓದಿನತ್ತ ಗಮನ ಹರಿಸುತ್ತಾರೆ.
ಪೂಜಾ ಕೋಣೆಯ ಕರ್ಟನ್
ಮನೆಯಲ್ಲಿ ಅತ್ಯಂತ ಪವಿತ್ರವಾದ ಸ್ಥಳವೆಂದರೆ ಪೂಜಾ ಕೋಣೆ. ಈ ಕೋಣೆಯ ಪರದೆಗಳು ಯಾವಾಗಲೂ ಕಿತ್ತಳೆ ಅಥವಾ ತಿಳಿ ಹಳದಿಯಾಗಿರಬೇಕು. ಈ ಎರಡೂ ಬಣ್ಣಗಳನ್ನು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣದ ಪರದೆಗಳನ್ನು ಅಳವಡಿಸಿದರೆ ಮನೆಯಲ್ಲಿ ಸಾತ್ವಿಕ ವಾತಾವರಣವನ್ನು ಸೃಷ್ಟಿಸಬಹುದು.
ಮನೆಯ ಸದಸ್ಯರ ನಡುವೆ ಆಗಾಗ ಜಗಳ ನಡೆಯುತ್ತಿದ್ದರೆ ಅಥವಾ ಪರಸ್ಪರ ಹೊಂದಾಣಿಕೆ ಇಲ್ಲದೇ ಇದ್ದಲ್ಲಿ ಮನೆಯ ದಕ್ಷಿಣ ದಿಕ್ಕಿನಲ್ಲಿ ಕೆಂಪು ಪರದೆಗಳನ್ನು ಅಳವಡಿಸಬೇಕು. ಇದು ಮನೆಯ ಸದಸ್ಯರಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದಿದ್ದರೆ ಮನೆಯ ಉತ್ತರ ದಿಕ್ಕಿನಲ್ಲಿ ನೀಲಿ ಪರದೆಗಳನ್ನು ಹಾಕಬೇಕು.
– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ
ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.
ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358