ಬೆಂಗಳೂರು : ಬಂದ್ ಆಗಿದ್ದ ‘ಮಾಲ್ ಆಫ್ ಏಷ್ಯಾ’ ಇಂದಿನಿಂದ ಮತ್ತೆ ಓಪನ್ ಆಗಿದೆ. ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್ ಆದೇಶ ನೀಡಿದ ಹಿನ್ನೆಲೆ ಎಲ್ಲಾ ವಿವಾದಗಳ ನಂತರ ‘ಮಾಲ್ ಆಫ್ ಏಷ್ಯಾ’ ಓಪನ್ ಆಗಿದೆ.
ಬೆಂಗಳೂರಿನ ಬ್ಯಾಟರಾಯನಪುರ ಬಳಿ ಇರುವ ಮಾಲ್ ಆಫ್ ಏಷ್ಯಾವನ್ನು ಕಳೆದ ಭಾನುವಾರದಿಂದ 16ದಿನಗಳ ಕಾಲ ಬಂದ್ ಮಾಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದರು. ಜನವರಿ 15 ರವರೆಗೆ ‘ಮಾಲ್ ಆಫ್ ಏಷ್ಯಾ ಪ್ರವೇಶ’ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಮಾಲ್ ನ ಆಡಳಿತ ಮಂಡಳಿ ಹೈಕೋರ್ಟ್ ಮೊರೆ ಹೋಗಿತ್ತು.
144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ಬೆಂಗಳೂರು ನಗರ ಪೊಲೀಸರು ‘ ಮಾಲ್ ಆಫ್ ಏಷ್ಯಾ ಪ್ರವೇಶ’ ಬಂದ್ ಮಾಡಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಮಾಲ್ ಆಫ್ ಏಷ್ಯಾ ಆಡಳಿತ ಮಂಡಳಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ನಂತರ ವಿಚಾರಣೆ ನಡೆಸಿದ ಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿ ಮಾಲ್ ಆಫ್ ಏಷ್ಯಾ’ ಓಪನ್ ಮಾಡಲು ಆದೇಶ ಹೊರಡಿಸಿತ್ತು, ಈ ಹಿನ್ನೆಲೆ ಇಂದಿನಿಂದ ಮತ್ತೆ ಮಾಲ್ ಆಫ್ ಏಷ್ಯಾ ಸಾರ್ವಜನಿಕರಿಗೆ ಮುಕ್ತವಾಗಿದೆ.
ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಬಳಕೆ ಮಾಡಬೇಕು, ಇಲ್ಲವಾದಲ್ಲಿ ಮಾಲ್ ಧ್ವಂಸ ಮಾಡುತ್ತೇವೆ ಎಂದು ಮಾಲ್ ಆಫ್ ಏಷ್ಯಾ ಎದುರು ಕನ್ನಡ ಪರ ಹೋರಾಟಗಾರರು ತೀವ್ರ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಮಾಲ್ ಆಫ್ ಏಷ್ಯಾ ಬಳಿ ಹೆಚ್ಚಿನ ಟ್ರಾಫಿಕ್ ಜಾಮ್ ಆಗುತ್ತದೆ ಎಂದು ಕೂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.