ಈ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರ ತಾನು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಉಚಿತ ಅಕ್ಕಿ ವಿತರಿಸಲು ಹಣ ನೀಡಿ ಭಾರತೀಯ ಆಹಾರ ನಿಗಮದಿಂದ ಅಕ್ಕಿ ಖರೀದಿಸಲು ಮುಂದಾದಾಗ ಕೇಂದ್ರ ಸರ್ಕಾರ ಅದಕ್ಕೆ ನಿರಾಕರಿಸಿದ್ದು, ಆದರೆ ಈಗ ಕೇಳಿದಷ್ಟು ಅಕ್ಕಿ ನೀಡಲು ಸಿದ್ಧವಾಗಿದೆ.
ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಗುರುವಾರದಂದು ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ಈ ವಿಷಯ ತಿಳಿಸಿದ್ದು, ಕಳೆದ ವರ್ಷ ವಿಶ್ವದಾದ್ಯಂತ ತೀವ್ರ ಬರಗಾಲ ಇತ್ತು. ಅಲ್ಲದೆ ಸಾಕಷ್ಟು ಅಕ್ಕಿಯ ದಾಸ್ತಾನು ಇರಲಿಲ್ಲ. ಆದರೆ ಈ ಬಾರಿ ಅಂತಹ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ಕಳೆದ ವರ್ಷ 34 ರೂ. ನಿಗದಿ ಮಾಡಲಾಗಿದ್ದು, ಈಗ 28 ರೂಪಾಯಿಗೆ ಅಕ್ಕಿಯನ್ನು ನೀಡಲಾಗುತ್ತದೆ. ರಾಜ್ಯ ಸರ್ಕಾರ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಬಹುದಾಗಿದ್ದು, ರಾಜ್ಯಗಳು ಇ – ಹರಾಜಿನಲ್ಲಿ ಭಾಗವಹಿಸದೆ ನೇರವಾಗಿ ಭಾರತೀಯ ಆಹಾರ ನಿಗಮದಿಂದ ಖರೀದಿ ಮಾಡಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.