ಬೆಂಗಳೂರು : ಬೆಂಗಳೂರು ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ಖಾಸಗಿ ವಾಹನ ಸವಾರರು ಬೆಂಬಲ ನೀಡಿದ್ದರೆ, ಇನ್ನೂ ಕೆಲವರು ಬೆಂಬಲ ನೀಡಿಲ್ಲ. ಇದರಿಂದ ಪ್ರತಿಭಟನಾಕಾರರು ವಾಹನಗಳ ಮೇಲೆ ಕಲ್ಲು ತೂರುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ.
ಕಾರು ಚಾಲಕನಿಗೆ ಮೈಸೂರು ಪೇಟ ತೊಡಿಸಿ ಸನ್ಮಾನ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಏರ್ಪೋರ್ಟ್ ಗೆ ಬಂದ ಕಾರ್ ಚಾಲಕನಿಗೆ ಪ್ರತಿಭಟನಾಕಾರರು ಮೈಸೂರು ಪೇಟ ತೊಡಿಸಿ ಸನ್ಮಾನ ಮಾಡಿ ಹಲ್ಲೆ ನಡೆಸಿದ್ದಾರೆ. ಕುತ್ತಿಗೆಗೆ ಹಾರ ಹಾಕಿ, ಶಾಲು ತೊಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಂದ್ ಇದ್ದರೂ ಬಂದಿದ್ದೀಯಲ್ಲ ಎಂದು ಉಗಿದು ಹಲ್ಲೆ ನಡೆಸಿ ಪ್ರತಿಭಟನಾಕಾರರು ದರ್ಪ ಮೆರೆದಿದ್ದಾರೆ. ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರತಿಭಟನಾಕಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ.
ಅದೇ ರೀತಿ ರಸ್ತೆಗಿಳಿದ ಮೂರು ಏರ್ಪೋರ್ಟ್ ಟ್ಯಾಕ್ಸಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ನಡೆದಿದೆ.ಈ ಹಿನ್ನೆಲೆ ಬೆಂಗಳೂರಿನ ಎಲ್ಲಾ ಕಡೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಏರ್ ಪೋರ್ಟ್ ನಿಂದ ಆಗಮಿಸುವ ವೇಳೆ ಏರ್ಪೋರ್ಟ್ ಟ್ಯಾಕ್ಸಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.