ಬೆಂಗಳೂರು : ವೈಟ್ನರ್ ಹಚ್ಚಿದ್ದಕ್ಕೆ ನಾನಾರ್ಥ ಕಲ್ಪಿಸಿದ ಬಿಜೆಪಿ – ಜೆಡಿಎಸ್ ಲೆಕ್ಕಾಚಾರ ಈಗ ಉಲ್ಟಾ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ಮುಡಾಗೆ ಬದಲಿ ಭೂಮಿ ನೀಡುವಂತೆ ನೀಡಿದ ಅರ್ಜಿಯಲ್ಲಿ ವೈಟ್ನರ್ ಹಚ್ಚಿರುವುದಕ್ಕೆ ನಾನಾರ್ಥ ಕಲ್ಪಿಸಿ, ನನ್ನ ವಿರುದ್ಧ ಮುಗಿಬಿದ್ದಿದ್ದ ಬಿಜೆಪಿ – ಜೆಡಿಎಸ್ನ ಸ್ವಯಂಘೋಷಿತ ಕಾನೂನು ಪಂಡಿತರ ಲೆಕ್ಕಾಚಾರ ಈಗ ತಲೆಕೆಳಗಾಗಿದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಕೆಲವರು, “ಟಾರ್ಚ್ ಹಿಡಿದವರು ಯಾರು? ವೀಡಿಯೋ ಮಾಡಿದ್ದು ಯಾರು?” ಎಂಬ ತಲೆಬುಡವಿಲ್ಲದ ಪ್ರಶ್ನೆ ಕೇಳುತ್ತಾ ತಮ್ಮನ್ನು ತಾವೇ ಸಮಾಧಾನಪಡಿಸಿಕೊಳ್ಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.