ಬೆಳಗಾವಿ : ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನಮುನಿಗಳ ಮೃತದೇಹ ಸಾಗಿಸಿದ್ದ ಬೈಕ್ ನ್ನು ಚಿಕ್ಕೋಡಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಚಿಕ್ಕೋಡಿಯಲ್ಲಿ ಬೈಕ್ ಗೆ ಪೆಟ್ರೋಲ್ ಹಾಕಿಸಿಕೊಂಡ ಹಂತಕರು ಆಶ್ರಮದತ್ತ ಪ್ರಯಾಣ ಬೆಳೆಸಿದ್ದಾರೆ. ನಂತರ ಜೈನಮುನಿಗೆ ಕರೆಂಟ್ ಶಾಕ್ ನೀಡಿ ಕೊಲ್ಲಲು ಯತ್ನಿಸಿದ್ದಾರೆ. ಬಳಿಕ ಟವೆಲ್ನಿಂದ ಕುತ್ತಿಗೆ ಬಿಗಿದು ಮಹಾರಾಜರ ಹತ್ಯೆ ಮಾಡಿದ್ದಾರೆ. ನಂತರ ಚೀಲದಲ್ಲಿ ಮೃತದೇಹ ಕಟ್ಟಿ ಬೈಕ್ನಲ್ಲಿ ಹೊತ್ತೊಯ್ದಿದ್ದರು. ಜೈನಮುನಿ ಬಳಸುತ್ತಿದ್ದ ಎರಡು ಮೊಬೈಲ್ ಅಲ್ಲೇ ಬಿಟ್ಟು ಅವರ ಡೈರಿ ತೆಗೆದುಕೊಂಡು ಹೋಗಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಸದ್ಯ ಆರೋಪಿಗಳನ್ನು ಜುಲೈ 17ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ನಾರಾಯಣ ಮಾಳಿಗೆ ಕೊಟ್ಟ ಹಣ ವಾಪಸ್ ಕೊಡುವಂತೆ ಜೈನಮುನಿಗಳು ಕೇಳಿದ್ದರು. ಇದರಿಂದ ಕೋಪಗೊಂಡಿದ್ದ ನಾರಾಯಣ ಮಾಳಿ, ಸ್ನೇಹಿತ ಹಸನ್ ದಲಾಯತ್ ಜೊತೆಗೆ ಸೇರಿ ಕೊಲೆ ಮಾಡಿದ್ದಾನೆ. ಕೊಲೆ ಮಡಿ ಶವವನ್ನು ಗೋಣಿ ಚೀಲದಲ್ಲಿ ಕಟ್ಟಿ ಬೈಕ್ ನಲ್ಲಿ ಕಟಕಬಾವಿವರೆಗೆ 35 ಕಿ.ಮಿ ಸಾಗಿಸಿದ್ದರು. ನಂತರ ಗ್ರಾಮದ ಕೊಳವೆ ಬಾವಿಗೆ ಶವವನ್ನು ಪೀಸ್ ಪೀಸ್ ಮಾಡಿ ಬೀಸಾಕಿದ್ದರು. ಜೊತೆಗೆ ಜೈನಮುನಿ ಗೆ ಸೇರಿದ ಬಟ್ಟೆ ಹಾಗೂ ಡೈರಿಯನ್ನು ಸುಟ್ಟುಹಾಕಿದ್ದಾರೆ. ಸದ್ಯ ಪೊಲೀಸರು ಜೈನಮುನಿ ಡೈರಿಯಲ್ಲಿ ಏನು ಬರೆದಿದ್ದರು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.