![](https://kannadadunia.com/wp-content/uploads/2022/07/mcms-1.jpg)
ಈ ದಿನ ನಾಗ ದೇವನನ್ನು ಪೂಜೆ ಮಾಡ್ತಾರೆ. ಸಂಪತ್ತನ್ನು ರಕ್ಷಿಸುವ ದೇವರು ಸರ್ಪ. ರಹಸ್ಯವಾಗಿರುವ ಹಾಗೂ ಗುಪ್ತವಾಗಿರುವ ಸಂಪತ್ತನ್ನು ರಕ್ಷಿಸುವ ದೇವರು ನಾಗ. ಧನ, ಸಂಪತ್ತು, ಸಮೃದ್ಧಿಗಾಗಿ ನಾಗ ದೇವನನ್ನು ಪೂಜೆ ಮಾಡ್ತಾರೆ ಭಕ್ತರು.
ಮಹಿಳೆಯರು ವಿಶೇಷವಾಗಿ ನಾಗ ದೇವನಿಗೆ ಪೂಜೆ ಮಾಡ್ತಾರೆ. ಹುತ್ತದ ಮಣ್ಣಿನಿಂದ ನಾಗರ ಹಾವನ್ನು ತಯಾರಿಸಿ ಪದ್ಧತಿಯಂತೆ ಪೂಜೆ ಮಾಡಲಾಗುತ್ತದೆ. ದೇವಸ್ಥಾನಗಳಿಗೆ ಹೋಗುವ ಮಹಿಳೆಯರು ಹುತ್ತಕ್ಕೂ ಹಾಲೆರೆದು ಆಯಸ್ಸು, ಸಂಪತ್ತು, ಸುಖ-ಸಂತೋಷಕ್ಕಾಗಿ ವಿಶೇಷ ಪೂಜೆ ಮಾಡ್ತಾರೆ. ತಂಬಿಟ್ಟು, ಅಕ್ಕಿಹಿಟ್ಟು, ಎಳ್ಳುಂಡೆಯನ್ನು ತಯಾರಿಸಿ ನಾಗರಾಜನಿಗೆ ಅರ್ಪಿಸುತ್ತಾರೆ. ಆಯಾ ಸ್ಥಳದಲ್ಲಿ ಯಾವ ಪದ್ಧತಿ ರೂಢಿಯಲ್ಲಿದೆಯೋ ಅದೇ ರೀತಿ ಹಬ್ಬ ಆಚರಿಸಲಾಗುತ್ತದೆ. ಕೆಲವರು ನಾಗರ ಪಂಚಮಿಯಂದು ಉಪವಾಸ ಮಾಡಿದ್ರೆ ಮತ್ತೆ ಕೆಲವು ಕಡೆ ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆ ನೀಡಿ ಸಂತೋಷಪಡ್ತಾರೆ.