
ಸೋಡಿಯಂ ಬೈಕಾರ್ಬನೇಟ್ ಅಥವಾ ಅಡುಗೆ ಸೋಡಾದಿಂದ ಹಲವಾರು ಉಪಯೋಗಗಳಿವೆ.
ಯಾವುದೇ ಹಾನಿಕಾರಕ ಅಡ್ಡಪರಿಣಾಮಗಳು ಇಲ್ಲದೇ ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಸಹಾಯಕ. ಇಂತಹ ಅಡುಗೆ ಸೋಡಾದ ಉಪಯೋಗಗಳನ್ನು ನೋಡೋಣ.
ಅತ್ಯುತ್ತಮ ನೈಸರ್ಗಿಕ ಕಿಚನ್ ಕ್ಲೀನರ್
ಅಡುಗೆ ಸೋಡಾ ಯಾವುದೇ ಸೋಪ್ ಗಿಂತ ಹತ್ತು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಒಂದು ಸ್ಪಾಂಜ್ ಅಥವಾ ಒದ್ದೆಯಾದ ಬಟ್ಟೆಯ ಮೇಲೆ ಸ್ವಲ್ಪ ಅಡುಗೆ ಸೋಡಾವನ್ನು ಸಿಂಪಡಿಸಿ ಬಳಸಿ.
– ಮೈಕ್ರೋವೇವ್ ಓವನ್ ಸ್ವಚ್ಛಗೊಳಿಸುತ್ತದೆ.
– ಕಾಫಿ / ಟೀ ಕಲೆಗಳನ್ನು ತೆಗೆದು ಹಾಕುತ್ತದೆ.
– ಸ್ವಿಚ್ ಬೋರ್ಡ್ ಗಳನ್ನು ಸ್ವಚ್ಛಗೊಳಿಸುತ್ತದೆ.
– ಪಾತ್ರೆಗಳಿಂದ ವಾಸನೆಯನ್ನು ತೆಗೆದು ಹಾಕುವುದು.
– ಸುಟ್ಟ ಮಡಿಕೆಗಳು ಮತ್ತು ಬಾಣಲೆಗಳನ್ನು ಸ್ವಚ್ಛಗೊಳಿಸುತ್ತದೆ.
– ರೆಫ್ರಿಜಿರೇಟರ್‌ನಿಂದ ಕಲೆಗಳನ್ನು ತೆಗೆದು ಹಾಕುತ್ತದೆ.
– ಹಣ್ಣುಗಳು ಮತ್ತು ತರಕಾರಿಗಳಿಂದ ಕೀಟನಾಶಕಗಳನ್ನು ಹೊರ ತೆಗೆಯುತ್ತದೆ.
ಬಟ್ಟೆಗಳ ಮೇಲಿನ ಕಲೆಗೆ ಅತ್ಯುತ್ತಮ
ಬಟ್ಟೆಗಳ ಮೇಲಿನ ಕಲೆಗೆ ಅತ್ಯುತ್ತಮ ಪರಿಣಾಮಕಾರಿ ಫಲಿತಾಂಶಗಳನ್ನು ಪಡೆಯಲು ಡಿಟರ್ಜೆಂಟ್ ಜೊತೆಗೆ ಅಡುಗೆ ಸೋಡಾವನ್ನು ಸೇರಿಸಿ. ಅಡುಗೆ ಸೋಡಾವನ್ನು ನೇರವಾಗಿ ವಾಶಿಂಗ್ ಮಶಿನ್‌ನಲ್ಲಿ ಬಳಸಬಹುದು.
– ಉಡುಪುಗಳಿಂದ ಕೆಟ್ಟ ವಾಸನೆ ಮತ್ತು ಸೋಂಕನ್ನು ತೆಗೆದು ಹಾಕುತ್ತದೆ.
– ಗ್ರೀಸ್ ಕಲೆಗಳನ್ನು ತೆಗೆದು ಹಾಕುತ್ತದೆ.
– ಇಂಕ್ ಮತ್ತು ವೈನ್ ಕಲೆಗಳನ್ನು ತೆಗೆದು ಹಾಕುತ್ತದೆ.
– ಹಳದಿ ಕಲೆಗಳನ್ನು ತೆಗೆದು ಹಾಕುತ್ತದೆ.
ಅತ್ಯುತ್ತಮ ಹೌಸ್ ಕ್ಲೀನರ್
ಒದ್ದೆಯಾದ ಬಟ್ಟೆಯ ಮೇಲೆ ಚಿಮುಕಿಸಿದ ಸ್ವಲ್ಪ ಅಡುಗೆ ಸೋಡಾ ಮನೆ ಮತ್ತು ಎಲ್ಲವನ್ನೂ ಹೊಳೆಯುವಂತೆ ಮಾಡುತ್ತದೆ. ಇದನ್ನು ಸ್ಪ್ರೇ ಅಥವಾ ಸ್ಕ್ರಬ್ ಆಗಿ ಬಳಸಬಹುದು.
– ಕಾರುಗಳನ್ನು ಸ್ವಚ್ಛಗೊಳಿಸುತ್ತದೆ.
– ಶೂಗಳ ಕೆಟ್ಟ ವಾಸನೆಯನ್ನು ತೆಗೆದುಹಾಕುತ್ತದೆ.
– ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತದೆ.
– ಮರದ ಪೀಠೋಪಕರಣಗಳಿಂದ ಕಲೆಗಳನ್ನು ತೆಗೆದುಹಾಕುತ್ತದೆ.
– ಆಭರಣಗಳನ್ನು ಸ್ವಚ್ಛಗೊಳಿಸುತ್ತದೆ.
– ಗೋಡೆಗಳಿಂದ ಕ್ರೆಯೋನ್/ಇಂಕ್/ಶಾಶ್ವತ ಮಾರ್ಕರ್ ಕಲೆಗಳನ್ನು ತೆಗೆದುಹಾಕುತ್ತದೆ.
ಹಲ್ಲಿನ ತೊಂದರೆಗಳಿಗೆ ಅತ್ಯುತ್ತಮ
ಹಲ್ಲುಗಳು ಮತ್ತು ಒಸಡುಗಳ ಆರೋಗ್ಯಕ್ಕೆ ಅಡುಗೆ ಸೋಡಾ ಬಳಸಿ.
– ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.
– ಹಲ್ಲು ಹಳದಿಗಟ್ಟುವಿಕೆಯನ್ನು ತಡೆಯುತ್ತದೆ.
– ಬಾಯಿ ಹುಣ್ಣು ಕಡಿಮೆ ಮಾಡುತ್ತದೆ.
– ಹಲ್ಲುಗಳನ್ನು ಶುದ್ಧ ಮತ್ತು ಬಿಳಿಯಾಗಿಸುತ್ತದೆ.