alex Certify ಬಾಳೆಹಣ್ಣಿನ ಸಿಪ್ಪೆಯಲ್ಲಿದೆ ಬ್ಯೂಟಿ ಸಿಕ್ರೇಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಳೆಹಣ್ಣಿನ ಸಿಪ್ಪೆಯಲ್ಲಿದೆ ಬ್ಯೂಟಿ ಸಿಕ್ರೇಟ್

ಬಾಳೆಹಣ್ಣಿನ ಫೇಸ್​ಪ್ಯಾಕ್​ ಬಗ್ಗೆ ನಮ್ಮೆಲ್ಲರಿಗೂ ಗೊತ್ತೇ ಇದೆ. ಆದರೆ ಸೈಲೆಂಟ್ ಆಗಿ ಕಸದ ಬುಟ್ಟಿಗೆ ಸೇರುವ ಬಾಳೆ ಹಣ್ಣಿನ ಸಿಪ್ಪೆಯಲ್ಲಿ ಎಷ್ಟೆಲ್ಲಾ ಬೆನಿಫಿಟ್ಸ್ ಇದೆ ಗೊತ್ತಾ? ಸೌಂದರ್ಯವರ್ಧಕವಾಗಿ ಬಾಳೆಹಣ್ಣಿನ ಸಿಪ್ಪೆಯ ಮ್ಯಾಜಿಕ್ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು. ಆ ಮೂಲಕ ಎವರ್​ಗ್ರಿನ್ ಬ್ಯೂಟಿ ನೀವಾಗಬಹುದು.

ಡಾರ್ಕ್​ ಸರ್ಕಲ್ ನಿವಾರಕ : ಕಣ್ಣಿನ ಸುತ್ತಲಿರುವ ಕಪ್ಪು ವರ್ತುಲ ನಿವಾರಣೆಗೆ ಬಾಳೆಹಣ್ಣಿನ ಸಿಪ್ಪೆಯ ಮಸಾಜ್ ಪ್ರಯೋಜನಕಾರಿ. ತಕ್ಷಣವೇ ತಾಜಾತನವನ್ನು ನೀಡುವ ಕಾರಣ ತ್ವಚೆ ಬ್ರೈಟ್ ಆಗುತ್ತದೆ.

ಡ್ರೈ ಸ್ಕಿನ್​ ಸಮಸ್ಯೆಗೆ ಪರಿಣಾಮಕಾರಿ : ಒಂದು ವೇಳೆ ನೀವು ಡ್ರೈ ಸ್ಕಿನ್​ ಸಮಸ್ಯೆಯಿಂದ ತುರಿಕೆ ಸಮಸ್ಯೆ ಅನುಭವಿಸುತ್ತಿದ್ರೆ ಬಾಳ ಸಿಪ್ಪೆ ನೆರವಿಗೆ ಬರುತ್ತದೆ. ವಿಟಮಿನ್ ಸಿ ಅಂಶವನ್ನು ಒಳಗೊಂಡ ಬಾಳೆಹಣ್ಣಿನ ಸಿಪ್ಪೆ ತ್ವಚೆಯನ್ನು ಮಾಯಿಸ್ಚರೈಸ್ ಮಾಡುವ ಮೂಲಕ ತೇವಾಂಶ ಕಾಪಾಡುತ್ತದೆ. ಆ ಮೂಲಕ ತುರಿಕೆ ಕಡಿಮೆಯಾಗುತ್ತದೆ.

ಮೊಡವೆ ಸಮಸ್ಯೆಗೆ ಅತ್ಯುತ್ತಮ ರೆಮಿಡಿ : ಬಾಳೆಹಣ್ಣಿನ ಸಿಪ್ಪೆಯೂ ತ್ವಚೆಯಲ್ಲಿನ ಎಣ್ಣೆ ಅಂಶವನ್ನು ಹೀರಿಕೊಳ್ಳುತ್ತದೆ. ಅಗತ್ಯಕ್ಕಿಂತ ಹೆಚ್ಚಾಗಿರುವ ಎಣ್ಣೆಯನ್ನು ಹೀರಿಕೊಳ್ಳುವುದರಿಂದ ಮೊಡವೆ ಉಂಟಾಗುವುದಿಲ್ಲ. ಅಲ್ಲದೇ ತ್ವಚೆಯಲ್ಲಿನ ಪೋರ್ಸ್​ಗಳನ್ನು ಮುಚ್ಚುತ್ತದೆ.

ಮುಪ್ಪನ್ನು ಮುಂದುಡೂತ್ತದೆ : ಬಾಳೆ ಹಣ್ಣಿನ ಸಿಪ್ಪೆಯಲ್ಲಿರುವ ವಿಟಮಿನ್ ಸಿ ಅಂಶದಿಂದ ತ್ವಚೆ ಇಳಿ ಬೀಳುವುದಿಲ್ಲ. ಇದರಿಂದಾಗಿ ಮುಖದ ಮೇಲಿನ ನೆರಿಗೆ ಮತ್ತು ಫೈನ್​ಲೈನ್​ಗಳು ನಿವಾರಣೆಯಾಗುತ್ತದೆ.

ಬಾಳೆಹಣ್ಣಿನ ಸಿಪ್ಪೆಯ ಫೇಸ್​ಮಾಸ್ಕ್, ಸ್ಕ್ರಬ್ಬರ್, ಮಾಯಿಸ್ಚರೈಸರ್​ ಬಳಕೆಯಿಂದ ತ್ವಚೆಯ ಆರೋಗ್ಯ ವೃದ್ಧಿಯಾಗುವುದಲ್ಲದೇ ದೀರ್ಘಕಾಲ ಕಾಂತಿಯುತವಾಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...