ಸುಂದರ ಮುಖಕ್ಕಾಗಿ ಹುಡುಗಿಯರು ಏನು ಮಾಡಲ್ಲ ಹೇಳಿ. ಫೇಶಿಯಲ್, ಬ್ಲೀಚ್, ಕ್ರೀಂ ಹೀಗೆ ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಹೊಳೆಯುವ, ಸುಂದರ ಮುಖವನ್ನು ನಿಮ್ಮದಾಗಿಸಿಕೊಳ್ಳಬಹುದು.
ಅಕ್ಕಿ ತೊಳೆದ ನೀರನ್ನು ನಾವು ಹಾಳು ಮಾಡ್ತೇವೆ. ಆದ್ರೆ ಜಪಾನಿನ ಹುಡುಗಿಯರು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಈ ನೀರನ್ನು ಬಳಸ್ತಾರೆ. ನೀವೂ ಸುಂದರ ಚರ್ಮ ಪಡೆಯಬೇಕೆಂದಾದ್ರೆ ಈ ಸುಲಭ ಉಪಾಯವನ್ನು ಅನುಸರಿಸಿ.
ಬೇಕಾಗುವ ಸಾಮಗ್ರಿ : ಮೂರು ಚಮಚ ಅಕ್ಕಿ, ನೀರು, ಏರ್ ಟೈಟ್ ಜಾರ್.
ಮೊದಲು ಅಕ್ಕಿಯನ್ನು ನೀರಿನಲ್ಲಿ 10 ನಿಮಿಷ ನೆನೆಸಿಡಿ. ನೀರು ಬಿಳಿ ಬಣ್ಣಕ್ಕೆ ಬರ್ತಾ ಇದ್ದಂತೆ ಆ ನೀರನ್ನು ಏರ್ ಟೈಟ್ ಜಾರಿನಲ್ಲಿ ಹಾಕಿ. ನಂತ್ರ ಹತ್ತಿಯ ಸಹಾಯದಿಂದ ಈ ನೀರನ್ನು ಮುಖಕ್ಕೆ ಹಚ್ಚಿಕೊಳ್ಳಿ.
ಈ ನೀರಿನಲ್ಲಿ ಮುಖ ತೊಳೆಯುವುದರಿಂದ ಚರ್ಮ ಹೊಳಪು ಪಡೆಯುವ ಜೊತೆಗೆ ಮುಕ್ತ ರಂಧ್ರಗಳು ಮುಚ್ಚಿ ಹೋಗುತ್ತವೆ.
ಸುಕ್ಕುಗಟ್ಟಿದ ಚರ್ಮ ಹೋಗಿ ಸುಂದರ ಚರ್ಮ ನಿಮ್ಮದಾಗುತ್ತದೆ.
ಚರ್ಮ ಇದರಿಂದ ಮೃದುವಾಗುತ್ತದೆ. ಮುಖದ ಮೇಲಿರುವ ಕಲೆಗಳು ಮಾಯವಾಗುತ್ತವೆ. ವಾರದಲ್ಲಿ ಒಮ್ಮೆ ಇದನ್ನು ಬಳಸುವುದು ಬಹಳ ಒಳ್ಳೆಯದು.