ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ವಿಶೇಷ ಕ್ಷಣಗಳು. ಈ ಕಾರಣಕ್ಕೆ ಮದುವೆಗೆ ತಿಂಗಳುಗಟ್ಟಲೇ ಸಿದ್ಧತೆ ನಡೆಯುತ್ತದೆ. ಅದರಲ್ಲೂ ವಧುವಿನ ಸೀರೆಯಿಂದ ಹಿಡಿದು ಹೇರ್ ಪಿನ್ ತನಕ ಎಲ್ಲವೂ ವಿಭಿನ್ನವಾಗಿರಲೇಬೇಕು. ಇನ್ನೂ ವಧುವಿನ ಕೇಶಾಲಂಕರಕ್ಕೆ ಬಂದರೆ ಮೊಗ್ಗಿನ ಜಡೆ ಮೊದಲ ಆದ್ಯತೆಯಾಗಿರುತ್ತದೆ. ಆದರೆ ಈಗ ಮಲ್ಲಿಗೆ ಹೂವಿನ ಮೊಗ್ಗಿನ ಜಡೆಗಿಂತಲೂ ಡಿಸೈನರ್ ವಿನ್ಯಾಸ ಮಾಡಿದ ಜಡೆಬಿಲ್ಲೆಗಳಿಗೆ ಬೇಡಿಕೆ ಹೆಚ್ಚು.
ಇನ್ನೂ ಕೇಶ ವಿನ್ಯಾಸದ ಪರಿಣಿತರು ಮದುವೆಗೆ ಎಂದೇ ಹಲವಾರು ವಿನ್ಯಾಸದ ಜಡೆಬಿಲ್ಲೆಗಳನ್ನು ಡಿಸೈನ್ ಮಾಡುತ್ತಾರೆ. ಗೋಲ್ಡನ್ ಜಡೆ ಬಿಲ್ಲೆಗಳು, ಡೈಮಂಡ್, ಆ್ಯಂಟಿಕ್, ಟೆಂಪಲ್ ವಿನ್ಯಾಸದ ಜಡೆ ಬಿಲ್ಲೆಗಳು ಸದ್ಯ ಹೆಚ್ಚು ಟ್ರೆಂಡ್ನಲ್ಲಿವೆ.
ಇನ್ನೂ ಹೂವಿನಿಂದ ಮೊಗ್ಗಿನ ಜಡೆ ಹೆಣೆಸಿಕೊಳ್ಳಬೇಕು ಎನ್ನುವವರಿಗಾಗಿ ವಿವಿಧ ಹೂಗಳನ್ನು ಬಳಸಿ ಫ್ಲೋರಲ್ ಆಭರಣಗಳನ್ನು ಜಡೆಗಾಗಿಯೇ ಡಿಸೈನ್ ಮಾಡಲಾಗುತ್ತದೆ. ಇದರಲ್ಲಿ ಮಲ್ಲಿಗೆ, ಗುಲಾಬಿ, ಆರ್ಕಿಡ್, ಜಪ್ಸಿ ಸೇರಿದಂತೆ ಹಲವಾರು ನೈಜ ಹೂಗಳು ಮತ್ತು ಕೃತಕ ಹೂಗಳನ್ನು ಸೇರಿಸಿ ಫ್ಲೋರಲ್ ಜಡೆಬಿಲ್ಲೆಯನ್ನು ವಿನ್ಯಾಸ ಮಾಡಲಾಗುತ್ತದೆ.
ವಧುವಿನ ಸೀರೆ, ಬ್ಲೌಸ್ ಡಿಸೈನ್ಗೆ ಅನುಗುಣವಾಗಿ ಜಡೆಬಿಲ್ಲೆಗಳನ್ನು ಸಿದ್ಧಪಡಿಸುತ್ತಾರೆ. ಕೇವಲ ವಧುವಷ್ಟೇ ಅಲ್ಲದೇ ಬ್ರೈಡ್ ಮೇಡ್ ಕೂಡ ಈ ಜಡೆ ಬಿಲ್ಲೆಗಳನ್ನು ಧರಿಸಿ ವಿಭಿನ್ನವಾಗಿ ಕಾಣಿಸುತ್ತಾರೆ.
ಒಟ್ಟಿನಲ್ಲಿ ಮೊಗ್ಗಿನ ಜಡೆ ಎಂದಿಗೂ ಮಾಸದ ಫ್ಯಾಷನ್ ಇದಕ್ಕೆ ಫ್ಲೋರಲ್ ಜಡೆಬಿಲ್ಲೆ ಸೇರಿಕೊಂಡು ಮಲ್ಲಿಗೆಯ ಘಮ ದೊಡ್ಡದಾಗಿ ಪಸರಿಸುತ್ತಿದೆ.