alex Certify ಹಂಪೆಯ ಆಕರ್ಷಣೆ ಹಜಾರ ʼರಾಮಸ್ವಾಮಿʼ ದೇಗುಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಂಪೆಯ ಆಕರ್ಷಣೆ ಹಜಾರ ʼರಾಮಸ್ವಾಮಿʼ ದೇಗುಲ

ರಾಮಾಯಣದ ಹಲವು ಪ್ರಸಂಗಗಳನ್ನು ಉಬ್ಬು ಕೆತ್ತನೆಯ ಮೂಲಕ ಇಲ್ಲಿ ಹೇಳಲಾಗುತ್ತದೆ. ಇದು ಭಗವಾನ್ ವಿಷ್ಣುವಿಗೆ ಸಮರ್ಪಿಸಿದ ಹಂಪಿಯ ಜನಪ್ರಿಯ ದೇವಾಲಯ. ಇದರ ಗೋಡೆಗಳು 15ನೆಯ ಶತಮಾನದ ಕಲಾಕೃತಿಗಳನ್ನು ಹೊಂದಿದ್ದು, ಅನೆ, ಕುದುರೆ, ಸೈನಿಕರು ಮತ್ತು ನೃತ್ಯಗಾತಿಯರ ಮೂರ್ತಿಗಳನ್ನು ಕೆತ್ತಲಾಗಿದೆ.

ಇಲ್ಲಿಗೆ ಬರುವ ಪ್ರವಾಸಿಗರಿಗೆ ಅಂದಿನ ಕಾಲದ ವಾಸ್ತುಶಿಲ್ಪ, ಸಂಸ್ಕೃತಿಯ ನೋಟದ ರಸದೌತಣವೇ ಸಿಗುತ್ತದೆ. ದೇವಾಲಯ ಪ್ರವೇಶಿಸುವ ಮೊದಲೇ ಮಟ್ಟಸವಾದ ಮೇಲ್ಛಾವಣಿಯ ದ್ವಾರ ಮಂಟಪ ಸಿಗುತ್ತದೆ. ಈ ಆಕರ್ಷಕ ಮಂಟಪದ ಮಧ್ಯ ಕಪ್ಪು ಹಜಾರ ಕೆತ್ತನೆಯಿದೆ. ಇದರ ಸುತ್ತ ವಿಷ್ಣುವಿನ ಒಂಬತ್ತನೇ ಅವತಾರವಾದ ಬುದ್ಧನ ವಿಗ್ರಹ ಕೆತ್ತಲಾಗಿದೆ.

ಇನ್ನೊಂದು ಕಡೆಯಲ್ಲಿ ಗರ್ಭಗುಡಿಗೆ ಹೋಗುವ ಬಾಗಿಲಿದೆ. ಜೆನನಾ ಎನ್ಕ್ಲೊಸರ್ ಮತ್ತು ಲೋಟಸ್ ಮಹಲ್ ಇದರ ಅಸುಪಾಸಿನಲ್ಲಿರುವ ಮತ್ತೆರಡು ಅಕರ್ಷಣೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಹಂಪೆ ಐತಿಹಾಸಿಕ ಪ್ರಸಿದ್ಧಿ ಸ್ಥಳ. ಇಲ್ಲಿಗೆ ಭೇಟಿ ನೀಡಿದವರು ಮರೆಯದೆ ನೋಡಬೇಕಾದ ಸ್ಥಳದಲ್ಲಿ ಇದೂ ಒಂದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...