ಜಗತ್ತಿನ ಕೆಲವು ಸ್ಥಳಗಳು ರಹಸ್ಯಮಯ ಮತ್ತು ಭಯಾನಕವಾಗಿವೆ. ಅಲ್ಲಿಗೆ ಜನ ಹೋಗಲು ಭಯಪಡುತ್ತಾರೆ. ಹಾಗೊಮ್ಮೆ ಯಾರಾದರೂ ಧೈರ್ಯಶಾಲಿಗಳು ಅಲ್ಲಿಗೆ ಹೋದರೂ ಅವರು ಮರಳಿ ಬರುವುದು ಅಸಾಧ್ಯ. ಇಂಗ್ಲೆಂಡ್ ನಲ್ಲಿ ಕೂಡ ಅಂತಹುದೇ ಒಂದು ಉದ್ಯಾನವಿದೆ. ಈ ಉದ್ಯಾನವನಕ್ಕೆ ಹೋದ ಯಾರೂ ಜೀವಸಹಿತ ಹೊರಗೆ ಬಂದಿಲ್ಲ. ಅಲ್ಲಿ ಹೋಗಿ ಉಸಿರಾಡಿದರೆ ಸಾಕು ಪ್ರಾಣ ಪಕ್ಷಿ ಹಾರಿಹೋಗುತ್ತೆ.
ಯುನೈಟೆಡ್ ಕಿಂಗಡಮ್ ನಾರ್ಥಂಬರ್ಲ್ಯಾಂಡ್ ನಲ್ಲಿರುವ ಈ ಗಾರ್ಡನ್ ಹೆಸರು ‘ದ ಅಲ್ನ್ವಿಕ್ ಪಾಯ್ಸನ್ ಗಾರ್ಡನ್’ (The Alnwick Poison Garden). ಎಲ್ಲರೂ ಉದ್ಯಾನವನಕ್ಕೆ ಖುಷಿಯಿಂದ ಹೋದರೆ ಇಲ್ಲಿಗೆ ಬರಲು ಜನ ಹೆದರುತ್ತಾರೆ. ಯಾರಾದರೂ ಇಲ್ಲಿಗೆ ಹೋಗಬೇಕಾದರೆ ತಮ್ಮ ಜೊತೆಗೆ ಗಾರ್ಡ್ ಗಳನ್ನು ಕರೆದುಕೊಂಡು ಹೋಗ್ತಾರೆ. ಇದು ಜಗತ್ತಿನ ಅತ್ಯಂತ ಅಪಾಯಕಾರಿ ಉದ್ಯಾನವನವಾಗಿದೆ. ಜೊತೆಗೆ ಇದು ಇಂಗ್ಲೆಂಡಿನ ಅತ್ಯಂತ ಆಕರ್ಷಣೆಯ ಸ್ಥಳವೂ ಹೌದು. ಏಕೆಂದರೆ ಇಲ್ಲಿ ವಿವಿಧ ಜಾತಿಯ ಸಸ್ಯಗಳು, ಪರಿಮಳಯುಕ್ತ ಗುಲಾಬಿಗಳು ಮತ್ತು ಕ್ಯಾಸ್ಕೇಡಿಂಗ್ ಕಾರಂಜಿಗಳು ಜನರನ್ನು ಆಕರ್ಷಿಸುತ್ತವೆ.
ಪಾಯ್ಸನ್ ಗಾರ್ಡನ್ ಪ್ರವೇಶ ದ್ವಾರಕ್ಕೆ ಕಪ್ಪು ಬಣ್ಣದ ಕಬ್ಬಿಣದ ಬಾಗಿಲಿದೆ. ಆ ಬಾಗಿಲಲ್ಲಿ ಹೂವುಗಳನ್ನು ಕೀಳುವುದು ಮತ್ತು ವಾಸನೆ ನೋಡುವುದನ್ನು ನಿಷೇಧಿಸಲಾಗಿದೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಜೊತೆಗೆ ಇಲ್ಲಿ ಅಪಾಯದ ಚಿಹ್ನೆಯನ್ನೂ ಹಾಕಿದ್ದಾರೆ. ಈ ವಿಷದ ಉದ್ಯಾನ 14 ಎಕರೆಗಳಿಗೆ ಹರಡಿದೆ. ಇದರಲ್ಲಿ ಸುಮಾರು 700 ವಿಷದ ಗಿಡಗಳಿವೆ. ಹಿಂದೆ ಶತ್ರುಗಳನ್ನು ಸೋಲಿಸಲು ಈ ವಿಷದ ಗಿಡಗಳನ್ನು ಬಳಸುತ್ತಿದ್ದರು ಎಂದು ಹೇಳಲಾಗುತ್ತೆ. ಈವರೆಗೆ ಈ ಗಾರ್ಡನ್ ಗೆ ಬಂದ 100ಕ್ಕೂ ಹೆಚ್ಚು ಜನ ರಹಸ್ಯವಾಗಿ ಸತ್ತಿದ್ದಾರೆ. ಈ ಗಾರ್ಡನ್ ಗೆ ಹೋದವರು ಸ್ವಲ್ಪ ಯಾಮಾರಿದರೂ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು.