ಇತ್ತೀಚಿಗಷ್ಟೇ ಪರ್ತ್ ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ನಲ್ಲಿ ಭಾರತ ತಂಡ 295 ರನ್ ಗಳಿಂದ ಜಯಭೇರಿ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಭಾರತದ ಯುವ ಪ್ರತಿಭೆ ಯಶಸ್ವಿ 161 ರನ್ ಬಾರಿಸುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ.
ಅಡಿಲೇಡ್ ನಲ್ಲಿ ಡಿಸೆಂಬರ್ 6 ರಿಂದ 10 ರ ವರೆಗೆ ಎರಡನೇ ಟೆಸ್ಟ್ ನಡೆಯಲಿದ್ದು, ಆಸ್ಟ್ರೇಲಿಯಾ ನೆಲದಲ್ಲಿ ಮತ್ತೊಂದು ದಾಖಲೆ ಬರೆಯಲು ಭಾರತ ತಂಡ ಸಜ್ಜಾಗಿದೆ.
ಭರ್ಜರಿ ಫಾರ್ಮ್ ನಲ್ಲಿರುವ ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ಹಾಗೂ ನಾಯಕ ಜಸ್ಪ್ರೀತ್ ಬುಮ್ರಾ ಅವರ ಮೇಲೆ ಎಲ್ಲರ ಕಣ್ಣಿದೆ. ಕಾಂಗರು ಪಡೆ ತನ್ನ ಹೋಂ ಗ್ರೌಂಡ್ ನಲ್ಲೇ ಕಳಪೆ ಪ್ರದರ್ಶನ ತೋರುತ್ತಿದ್ದು, ಟೀಕೆಗೆ ಗುರಿಯಾಗಿದೆ. ಜನವರಿ ಮೂರರವರೆಗೆ ಒಟ್ಟಾರೆ ಐದು ಟೆಸ್ಟ್ ಪಂದ್ಯವಿರಲಿದೆ.