ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ವಿಚಾರಗಳು ಇತ್ತೀಚಿನ ವರ್ಷಗಳಲ್ಲಿ ಬಹಳ ಚರ್ಚೆಗೆ ಒಳಗಾದ ಸಂಗತಿಗಳು. ಈ ಅಹಿತಕರ ಬೆಳವಣಿಗೆಯಿಂದ ಏನೆಲ್ಲಾ ಅನಾಹುತಗಳು ಆಗಲಿವೆ ಎಂದು ತಜ್ಞರು ದಿನಂಪ್ರತಿ ಹೇಳುತ್ತಲೇ ಇರುತ್ತಾರೆ.
ಇದೀಗ, 2022 ಸಿಡ್ನಿ ಫೆಸ್ಟಿವಲ್‌ನಲ್ಲಿ ಕಲಾವಿದರು ಇದೇ ವಿಚಾರವಾಗಿ ಅರಿವು ಮೂಡಿಸಲು ಮೈನವಿರೇಳಿಸುವ ಸ್ಟಂಟ್ ಒಂದನ್ನು ಮಾಡಿದ್ದಾರೆ.
ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
ಸಿಡ್ನಿ ಬಂದರಿನ ಮೇಲೆ, ವಿಶ್ವ ವಿಖ್ಯಾತ ಒಪೇರಾ ಹೌಸ್ ನೆತ್ತಿಯ ಮೇಲೆ 2.7 ಟನ್‌ನಷ್ಟು ಬೃಹತ್ ಮಂಜುಗಡ್ಡೆಯನ್ನು ನೇತು ಹಾಕಲಾಗಿದ್ದು, ’ಥಾ’ ಎಂಬ ಹೆಸರಿನ ಈ ಭಾಗದಿಂದ ಹವಾಮಾನ ಬದಲಾವಣೆ ಕುರಿತ ಅರಿವು ಮೂಡಿಸಲಾಗಿದೆ.
ಜಾಗತಿಕ ತಾಪಮಾನ ಏರಿಕೆಯಿಂದ ಎಲ್ಲೆಡೆ ಮಂಜು ಕರಗುತ್ತಿರುವುದನ್ನು ಈ ಬೃಹತ್ ಮಂಜುಗಡ್ಡೆ ಪ್ರತಿನಿಧಿಸಿದ್ದು, ಇವುಗಳ ಮೇಲೆ ಮೂವರು ಏರಿಯಲಿಸ್ಟ್‌ಗಳು ಮೂರು ದಿನಗಳ ಮಟ್ಟಿಗೆ ತಲಾ 10 ಗಂಟೆಗಳ ಕಾಲ ಕುಣಿದಿದ್ದಾರೆ.
ಆಸ್ಟ್ರೇಲಿಯಾದ ಬೇಸಿಗೆ ದಿನಗಳಲ್ಲಿ ಈ ಮಂಜುಗಡ್ಡೆ ಕರಗಲಿದ್ದು, ಜಗತ್ತಿನ ಮಂಜುಗಡ್ಡೆಗಳು ಸಹ ಹೇಗೆ ತಾಪಮಾನ ಹೆಚ್ಚಳದಿಂದ ಕರಗಲಿವೆ ಎಂಬ ವಿಷಯವಾಗಿ ಈ ಸ್ಟಂಟ್‌ನ ಮೂಲ ಥೀಂ ಇಟ್ಟುಕೊಳ್ಳಲಾಗಿದೆ.