ನಾನು ನೂರು ಬಾರಿ ಐ ಲವ್ ಯೂ ಹೇಳಿದ್ರೆ ನನ್ನ ಬಾಯ್ ಫ್ರೆಂಡ್ ಒಮ್ಮೆ ಹೇಳೋದು ಕಷ್ಟ. ನಾನು ಐ ಲವ್ ಯು ಹೇಳಿದ್ರೆ ನಕ್ಕು ಸುಮ್ಮನಾಗ್ತಾನೆ. ಇದು ಬಹುತೇಕ ಹುಡುಗಿಯರ ದೂರು. ಇದೇ ವಿಚಾರಕ್ಕೆ ಹುಡುಗಿಯರು ಸಂಗಾತಿ ಜೊತೆ ಜಗಳ ಮಾಡೋದೂ ಇದೆ.
ಇಂತ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಹುಡುಗ ಹಾಗೂ ಹುಡುಗಿ ಭಾವನೆಗಳನ್ನು ವ್ಯಕ್ತಪಡಿಸುವ ವಿಧಾನ ಬೇರೆ ಬೇರೆಯಾಗಿರುತ್ತದೆ. ಸಾಮಾನ್ಯವಾಗಿ ಎಲ್ಲರ ಮುಂದೆ ನನ್ನ ಹುಡುಗ ನನಗೆ ಐ ಲವ್ ಯೂ ಹೇಳಲಿ, ಗಿಫ್ಟ್ ಕೊಡಲಿ, ನನ್ನ ಹಿಂದೆ ಮುಂದೆ ಓಡಾಡ್ಲಿ ಅಂತಾ ಹುಡುಗಿಯರು ಬಯಸ್ತಾರೆ. ಆದ್ರೆ ಹುಡುಗರ ಮನಸ್ಥಿತಿ ಬೇರೆ.
ಬಹುತೇಕ ಹುಡುಗರಿಗೆ ಸಾರ್ವಜನಿಕರ ಮುಂದೆ ತಮ್ಮ ಖಾಸಗಿ ವಿಚಾರವನ್ನು ವ್ಯಕ್ತಪಡಿಸುವುದು ಇಷ್ಟವಾಗುವುದಿಲ್ಲ. ತಮ್ಮ ವೈಯಕ್ತಿಕ ವಿಚಾರ ಬೇರೆಯವರ ಕಿವಿಗೆ ಕೇಳದಿರಲಿ ಎಂದು ಬಯಸುವ ಪುರುಷರ ಸಂಖ್ಯೆ ಹೆಚ್ಚಿರುತ್ತದೆ.
ಸಂಗಾತಿ ಮೇಲೆ ಪ್ರೀತಿ ಇದೆ. ಅದನ್ನು ಮತ್ತೆ ಮತ್ತೆ ವ್ಯಕ್ತಪಡಿಸುವ ಅವಶ್ಯಕತೆ ಏನಿದೆ. ಪದೇ ಪದೇ ಐ ಲವ್ ಯೂ ಹೇಳುವ ಅಗತ್ಯವಿಲ್ಲ ಎಂಬ ಭಾವನೆ ಇನ್ನೂ ಕೆಲ ಹುಡುಗ್ರದ್ದು.
ಒಂದೇ ವಿಷ್ಯವನ್ನು ಪದೇ ಪದೇ ಹೇಳಿದ್ರೆ ಅದು ಮಹತ್ವ ಕಳೆದುಕೊಳ್ಳುತ್ತದೆ. ಐ ಲವ್ ಯೂ ಮ್ಯಾಜಿಕಲ್ ಶಬ್ದವಾಗಿದ್ದರೂ ಅದು ಅರ್ಥ ಕಳೆದುಕೊಳ್ಳುವುದು ಬೇಡ ಎನ್ನುವ ಕಾರಣಕ್ಕೆ ಸುಮ್ಮನಾಗ್ತಾರೆ ಕೆಲ ಹುಡುಗರು.
ನಾಚಿಕೆ ಸ್ವಭಾವದ ಹುಡುಗರಿರ್ತಾರೆ. ನಿಮಗೆ ಆಶ್ಚರ್ಯವಾದ್ರೂ ಇದು ಸತ್ಯ. ನಾಚಿಕೆ ಸ್ವಭಾವದ ಹುಡುಗರು ಮನಸ್ಸಿನಲ್ಲಿ ಐ ಲವ್ ಯೂ ಹೇಳಬೇಕೆಂದಿದ್ದರೂ ಹೇಳೋದಿಲ್ಲ.
ಪ್ರೀತಿ ವ್ಯಕ್ತಪಡಿಸುವ ವಿಚಾರದಲ್ಲಿ ಹುಡುಗರಿಗಿಂತ ಹುಡುಗಿಯರು ಮುಂದಿದ್ದಾರೆಂದು ಅಧ್ಯಯನವೊಂದು ಹೇಳಿದೆ. ಹುಡುಗ್ರು ಕಾಳಜಿ ಮಾಡ್ತಾರೆ. ಆದ್ರೆ ತಮ್ಮಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸೋದಿಲ್ಲ.