alex Certify ಹುಲಿ, ಸಿಂಹ ಮತ್ತು ನಾಯಿಯ ಆಟ: ಕುತೂಹಲದ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿ, ಸಿಂಹ ಮತ್ತು ನಾಯಿಯ ಆಟ: ಕುತೂಹಲದ ವಿಡಿಯೋ ವೈರಲ್​

ಹುಲಿಗಳು ಮತ್ತು ಸಿಂಹಗಳಂತಹ ವನ್ಯ ಮೃಗಗಳು ನಾಯಿಯಂಥ ಸಾಕು ಪ್ರಾಣಿಗಳಂತೆಯೇ ಆಟವಾಡುತ್ತದೆ ಎಂದು ಕೆಲವೊಮ್ಮೆ ಊಹಿಸಲು ಕೂಡ ಸಾಧ್ಯವಿಲ್ಲ. ಆದರೆ, ಈ ಅಸಾಧ್ಯ ದೃಶ್ಯವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ನಾಯಿಯು ಹುಲಿಯನ್ನು ಕಚ್ಚುವುದನ್ನು ನೋಡಬಹುದು. ಆಗ ಸಿಂಹವು ಆಟವಾಡುತ್ತಾ ಕಚ್ಚುವುದನ್ನು ತಪ್ಪಿಸಿಕೊಳ್ಳುತ್ತದೆ. ನಂತರ ಚಿಕ್ಕ ಮಕ್ಕಳಂತೆ ಇವುಗಳ ಆಟವಾಡುತ್ತವೆ. ಅದೇ ಇನ್ನೊಂದೆಡೆ, ಸಿಂಹವು ಹುಲಿಯ ಮೇಲೆ ತಮಾಷೆಯಾಗಿ ಆಕ್ರಮಣ ಮಾಡಲು ಪ್ರಯತ್ನಿಸುತ್ತದೆ. ಈ ಮೂರೂ ಪ್ರಾಣಿಗಳ ಸೇರಿ ಆಡುವ 31 ಸೆಕೆಂಡುಗಳ ವಿಡಿಯೋ ಅಚ್ಚರಿ ತರುವಂತಿದೆ.

ಈ ಗೊಂದಲದ ವಿಡಿಯೋವನ್ನು ಪರೀಖ್ ಜೈನ್ (@pareekhjain) ಎಂಬ ಟ್ವಿಟರ್ ಬಳಕೆದಾರರು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. “ಹುಲಿ, ಸಿಂಹ ಮತ್ತು ನಾಯಿಯ ನಡುವೆ ಕಾಳಗ, ನಿಮ್ಮ ಹುಚ್ಚು ಕಲ್ಪನೆಯನ್ನು ಬಿಟ್ಟು ಇದನ್ನು ನೋಡಿ” ಎಂದು ಪರೀಖ್​ ಅವರು ಬರೆದಿದ್ದಾರೆ. ಈ ಘಟನೆ ಸೈಬೀರಿಯನ್ ಮೃಗಾಲಯದಲ್ಲಿ ನಡೆದಿದ್ದು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...