1992ರಲ್ಲಿ ಬಾಬ್ರಿ ಮಸೀದಿ ಕೆಡವಿದಂತೆ ಜ್ಞಾನವ್ಯಾಪಿ ಮಸೀದಿಯನ್ನೂ ಕೆಡವಲಾಗುವುದು ಅಂತ ಬಿಜೆಪಿ ನಾಯಕ ಸಂಗೀತ್ ಸೋಮ್ ವಿವಾದಾದ್ಮಕ ಹೇಳಿಕೆ ಕೊಟ್ಟಿದ್ದಾರೆ. ಇದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ಹಿಂದೂ ದೇವಾಲಯವಿತ್ತು. ಆ ದೇಗುಲವನ್ನ ಮುಸ್ಲಿಂ ದಾಳಿಕೋರರು ಕೆಡವಿ. ಅದೇ ಜಾಗದಲ್ಲಿ ಬಾಬ್ರಿ ಮಸೀದಿಯನ್ನ ಕಟ್ಟಿದ್ದರು. ಈಗ ಅದೇ ಘಟನೆ ಮತ್ತೆ ಪುನರಾವರ್ತನೆ ಆಗಲಿದೆ. ಬಾಬ್ರಿ ಮಸೀದಿ ಕೆಡವಿದಂತೆಯೇ ಜ್ಞಾನವ್ಯಾಪಿ ಮಸೀದಿಯನ್ನ ಸಹ ಕೆಡವಲಾಗುವುದು. ಬಾಬ್ರಿ ಮಸೀದಿ ಕೆಡವಿದ ದಿನವೇ ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕಾಗಿತ್ತು. ದೇಶವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅಂತ. ಈಗ ಯಾವ ಮಸೀದಿ ಆದರೂ ಅಷ್ಟೆ ಅದನ್ನ ಬಿಡುವುದಿಲ್ಲ ಒಂದೊಂದಾಗಿ ಎಲ್ಲವನ್ನೂ ಕೆಡವಲಾಗುತ್ತೆ ಅಂತ ಸಹ ಹೇಳಿದ್ದಾರೆ.
ಅಷ್ಟೇ ಅಲ್ಲ, ಶ್ರೀರಾಮನ ವಿಗ್ರಹ ಹಲವು ವರ್ಷಗಳಿಂದ ಟಾರ್ಪಾಲಿನ್ ನಲ್ಲಿ ಉಳಿಸಲಾಗಿತ್ತು. ಆದರೆ ಈಗ ಭವ್ಯ ಮಂದಿರವನ್ನ ನಿರ್ಮಿಸಲಾಗುತ್ತಿದೆ. ಇಂದು ಹುಡುಕಾಡಿದರೂ ಬಾಬರಿ ಮಸೀದಿಯ ಒಂದು ಇಟ್ಟಿಗೆ ಸಹ ಸಿಗುವುದಿಲ್ಲ. ಜ್ಞಾನವ್ಯಾಪಿ ಮಸೀದಿಗೂ ಇದೇ ಗತಿಯಾಗಲಿದೆ. ಆ ಮಸೀದಿಯಲ್ಲಿ ದೇವಾಲಯದ ಪುರಾವೆಗಳಿವೆ ಎಂಬುದನ್ನು ತಿಳಿದಿದ್ದರಿಂದಲೇ ಮುಸ್ಲಿಮರು ಉದ್ದೇಶಪೂರ್ವಕವಾಗಿ ಸಂಕೀರ್ಣದ ಸರ್ವೇಕ್ಷಣೆಗೆ ಅಡೆತಡೆಗಳನ್ನ ಸೃಷ್ಟಿಸುತ್ತಿದ್ದಾರೆ ಅಂತ ಸಹ ಸಂಗೀತ್ ಸೋಮ್ ಆರೋಪಿಸಿದ್ದಾರೆ.