ಮೈಸೂರು : ಆ ವಿವೇಕಾನಂದ ಬೇರೆ, ಈ ವಿವೇಕಾನಂದ ಬೇರೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಯತೀಂದ್ರ ವೈರಲ್ ವಿಡಿಯೋಗೆ ಪ್ರತಿಕ್ರಿಯೆ ನೀಡಿದರು.ಆ ವಿವೇಕಾನಂದ ಬೇರೆ ಈ ವಿವೇಕಾನಂದ ಬೇರೆ. ಅವರು ಬಿಐಓ, ಇವರು ಇನ್ಸ್ ಪೆಕ್ಟರ್. ಕುಮಾರಸ್ವಾಮಿಗೆ ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಬಿಇಓ ನಮ್ಮ ಕ್ಷೇತ್ರವರು ಈಗ ವರ್ಗಾವಣೆ ಆಗಿರುವುದು ಚಾಮರಾಜ ಕ್ಷೇತ್ರ ವ್ಯಾಪ್ತಿ ಎಂದರು.
ಕುಮಾರಸ್ವಾಮಿಗೆ ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಾರೆ, ಅವರು ಮಾಜಿ ಸಿಎಂ..ಆ ಘನತೆಗೆ ತಕ್ಕ ಮಾತನಾಡಿ ಗೌರವ ಉಳಿಸಿಕೊಳ್ಳಿ ಎಂದು ಡಿಸಿಎ ಡಿಕೆ ಶಿವಕುಮಾರ್ ಕೂಡ ತಿರುಗೇಟು ನೀಡಿದ್ದಾರೆ.