ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ಆಗಸ್ಟ್ 27 ರಂದು ನಡೆಯಲಿದೆ.
ಆಗಸ್ಟ್ 27 ರಂದು ಬೆಳಗ್ಗೆ 10 ರಿಂದ 12 ಗಂಟೆಯವರೆಗೆ ಪತ್ರಿಕೆ -1, ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರೆಗೆ ಪತ್ರಿಕೆ -2ರ ಪರೀಕ್ಷೆ ನಡೆಯಲಿದೆ.ಪರೀಕ್ಷೆ ನಡೆಯುವ 214 ಸರ್ಕಾರಿ, 189 ಅನುದಾನಿತ, 161 ಖಾಸಗಿ ಶಾಲಾ, ಕಾಲೇಜುಗಳು ಸೇರಿದಂತೆ 564 ಪರೀಕ್ಷಾ ಉಪ ಕೇಂದ್ರಗಳಿಗೆ ವಿಶೇಷ ರಜೆ ನೀಡಲಾಗಿದೆ.
ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ
ಈಗಾಗಲೇ ಕೆಪಿಎಸ್ಸಿ ವೆಬ್ಸೈಟ್ನಲ್ಲಿ ಹಾಲ್ ಟಿಕೆಟ್ ಲಭ್ಯವಿದ್ದು, ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬಹುದು.
ಅಭ್ಯರ್ಥಿಗಳು ತುಂಬು ತೋಳಿನ ಶರ್ಟ್ ಧರಿಸುವ ಹಾಗಿಲ್ಲ. ಅರ್ಧ ತೋಳಿನ ಶರ್ಟ್ ಧರಿಸಬೇಕು. ಸರಳ ಉಡುಪು ಧರಿಸಿ ಪರೀಕ್ಷೆಗೆ ಹಾಜರಾಗುವುದು.ವಿವಿಧ ರೀತಿಯ ವಿನ್ಯಾಸವುಳ್ಳ ವಸ್ತ್ರಗಳನ್ನು ಧರಿಸುವುದನ್ನು ನಿಷೇಧಿಸಿದೆ
ಯಾವುದೇ ರೀತಿಯ ಆಭರಣಗಳನ್ನುಧರಿಸುವಂತಿಲ್ಲ (ಮಂಗಳ ಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ). ಶೂ ಮತ್ತು ಸಾಕ್ಸ್ ಧರಿಸುವುದನ್ನು ನಿಷೇಧಿಸಿದೆ ಹಾಗೂ ಸರಳ ಚಪ್ಪಲಿಗಳನ್ನು ಧರಿಸಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರಬೇಕು ಹಾಗೂ ಜೊತೆಗೆ ಬ್ಲಾಕ್ ಬಾಲ್ ಪಾಯಿಂಟ್ ಪೆನ್ನನ್ನು ತರತಕ್ಕದ್ದು.ಒಎಂಆರ್ ಉತ್ತರ ಹಾಳೆಯಲ್ಲಿನ ಎಲ್ಲಾ ನಮೂದು (Marking) ಗಳನ್ನು ಕಪ್ಪು ಬಾಲ್ ಪಾಯಿಂಟ್ ಪೆನ್ನಿನಿಂದ ಮಾತ್ರ ಮಾಡತಕ್ಕದ್ದು.
ಚೀಟಿಯ ಪ್ರತಿ ಪ್ರವೇಶಪತ್ರದ ಪ್ರತಿ ಹಾಗೂ ಪಾಸ್ಪೋರ್ಟ್/ ಸ್ಟ್ಯಾಂಪ್ಅಳತೆಯ 2 ಭಾವಚಿತ್ರಗಳನ್ನು ಕಡ್ಡಾಯವಾಗಿ ಸಂವೀಕ್ಷಕರಿಗೆ ನೀಡಿ ಒಂದು ಭಾವಚಿತ್ರವನ್ನು ನಾಮಿನಲ್ ರೋಲ್ ನಲ್ಲಿನ ನಿಗದಿತ ಅಂಕಣದಲ್ಲಿ ಮತ್ತು ಇನ್ನೊಂದು ಭಾವಚಿತ್ರವನ್ನು ಈ ಸಂಬಂಧ ಸಲ್ಲಿಸುವ ಮುಚ್ಚಳಿಕೆ ಪತ್ರದಲ್ಲಿ ಅಂಟಿಸಿ ದೃಢೀಕರಿಸುವುದು.
ಪರೀಕ್ಷೆಯ ಪ್ರವೇಶ ಪತ್ರ ದ ಜೊತೆಗೆ ಆಧಾರ್ ಕಾರ್ಡ್ ಅಥವಾ ಯಾವುದಾದರೂ ಒಂದು ಐಡಿ ಪ್ರೂಫ್ ತರಬೇಕು.ಅಂಗವಿಕಲ ಅಭ್ಯರ್ಥಿಗಳು ನಿಗದಿತ ಅಂಗವಿಕಲ ಪ್ರಮಾಣ ಪತ್ರಗಳನ್ನು ತರಬೇಕು.