ನವಯುಗದ ಕಂಪನಿಗಳಲ್ಲಿ ಕಂಡುಬರುವ ಸಾರ್ವಜನಿಕ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಓ) ಮತ್ತು ಕಾರ್ಮಿಕರ ಸ್ಟಾಕ್ ಮಾಲೀಕತ್ವ ಕಾರ್ಯಕ್ರಮಗಳಂಥ (ಇಎಸ್‌ಓಪಿ) ಟ್ರಂಡ್‌ಗಳ ಮೂಲಕ ದೇಶದ ಆರ್ಥಿಕತೆಗೆ ಒಂದು ರೀತಿಯ ಚೈತನ್ಯ ಸಿಗುವುದರೊಂದಿಗೆ, ಶೇರು ಮಾರುಕಟ್ಟೆಯ ಮೂಲಕ ಕಂಪನಿಗಳ ಸಂಸ್ಥಾಪಕ ವರ್ಗದಲ್ಲಿ ಇರದ ಮಂದಿಗೂ ಸಹ ವ್ಯವಹಾರಗಳಲ್ಲಿ ಭಾಗಿಯಾಗುವ ಅವಕಾಶ ಸಿಗುತ್ತಿದೆ.
ಶೇರು ಮಾರುಕಟ್ಟೆಯ ಪಟ್ಟಿ ಸೇರಿಸಿರುವ ಖಾಸಗಿಕಂಪನಿಗಳಲ್ಲಿರುವ ಸುಮಾರು 35ರಷ್ಟು ಸಂಸ್ಥಾಪಕೇತದ ಕಾರ್ಯನಿರ್ವಾಹಕರು ಈ ರೀತಿಯ ಸ್ಟಾಕ್ ಆಯ್ಕೆಗಳಿಂದಾಗಿ ಇಂದು 100 ಕೋಟಿ ರೂಗೂ ಮೀರಿದ ಆಸ್ತಿಯ ಮಾಲೀಕರಾಗಿದ್ದಾರೆ ಎಂದು ಲಾಂಗ್‌ಹೌಸ್ ಕನ್ಸಲ್ಟಿಂಗ್‌ನ ಸಂಶೋಧನಾ ಅಧ್ಯಯನ ವರದಿ ತಿಳಿಸಿದೆ.
ಪ್ರಧಾನಿ ಮೋದಿಯ ಆಡಳಿತ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ ಶರದ್ ಪವಾರ್
ಈ ಸಣ್ಣ ಸಮೂಹದಲ್ಲಿರುವ ಸದಸ್ಯರು, ಪಟ್ಟಿಯಲ್ಲಿರುವ ಕಂಪನಿಗಳಾದ ಫ್ಲಿಪ್‌ಕಾರ್ಟ್, ಫೋನ್‌ಪೇ, ರೇಜ಼ರ್‌ಪೇ, ಉಡಾನ್, ನೈಕಾ, ಜ಼ೊಮ್ಯಾಟೋ, ಪಾಲಿಸಿಬಜ಼ಾರ್ ಮತ್ತು ಪೇಟಿಎಂ ನಂತಹ ಖಾಸಗಿ ಕಂಪನಿಗಳಲ್ಲಿ ಇಎಸ್‌ಓಪಿಗಳನ್ನು ಹೊಂದಿದ್ದಾರೆ.
ಹೀಗೆ ಮಾಡಲಾದ ಹೂಡಿಕೆಯ ಮೊತ್ತ $36 ಶತಕೋಟಿ ದಾಟಿದ್ದು, ಭಾರತೀಯ ಸ್ಟಾರ್ಟ್‌ಅಪ್‌ಗಳನ್ನು ಈ ವರ್ಷ ಕೂಡಿಕೊಂಡಿದೆ. ಈ ಕಂಪನಿಗಳಲ್ಲಿ ಉದ್ಯೋಗಿಗಳೀಗೆ ಸ್ಟಾಕ್ ವಿನಿಮಯದ ಆಯ್ಕೆಗಳನ್ನು ನೀಡಲಾಗಿದೆ. ಈ ಮೂಲಕ ಪ್ರತಿಭೆಗಳನ್ನು ಆಕರ್ಷಿಸಿ, ಬೆಳೆಯಲು ಉತ್ತಮ ಅವಕಾಶಗಳನ್ನು ಸ್ಟಾರ್ಟ್-ಅಪ್‌ಗಳು ಕೊಡಮಾಡುತ್ತಿವೆ.
ಫೋನ್‌ಪೇ ಕಂಪನಿ ಒಂದೇ 2020ರಲ್ಲಿ ತನ್ನ ಉದ್ಯೋಗಿಗಳಿಗೆ 1,500 ಕೋಟಿ ರೂಪಾಯಿಗಳಷ್ಟು ಇಎಸ್‌ಓಪಿಗಳನ್ನು ನೀಡಿದ್ದು, ಕನಿಷ್ಠ 3.5 ಲಕ್ಷ ರೂಗಳ ಪ್ಯಾಕೇಜ್‌ನ ಆಯ್ಕೆಯನ್ನು ನೀಡಿತ್ತು. ಈ ಮೂಲಕ ತನ್ನ ಉದ್ಯೋಗಿಗಳಿಗೆ ಸಂಪತ್ತು ಸೃಷ್ಟಿಯ ಅವಕಾಶ ನೀಡಿತ್ತು ಫೋನ್‌ಪೇ.